ನವದೆಹಲಿ, ನ 19 (DaijiworldNews/MS): ಕಳೆದ ವರ್ಷ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ದೇಶದ ರೈತರು ತಮ್ಮ ಸತ್ಯಾಗ್ರಹದಿಂದ ದುರಹಂಕಾರವನ್ನು ಸೋಲಿಸಿದ್ದಾರೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಈ ವರ್ಷದ ಜನವರಿಯಲ್ಲಿ ಮಾಡಿರುವ " ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ, ಸರ್ಕಾರವು ಈ ರೈತ ವಿರೋಧಿಯನ್ನು ಹಿಂಪಡೆಯುತ್ತದೆ" ಎಂದು ಹೇಳಿರುವ ಹಳೆಯ ಟ್ವೀಟ್ ಜೊತೆಗೆ ಟ್ವೀಟ್ ಮಾಡಿರುವ "ದೇಶದ ರೈತರು ತಮ್ಮ ಸತ್ಯಾಗ್ರಹದಿಂದ ದುರಹಂಕಾರವನ್ನು ಸೋಲಿಸಿದ್ದಾರೆ. ಜೈ ಹಿಂದಿ, ಜೈ ಹಿಂದಿ ರೈತರೇ" ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಮಟ್ಟದ ವಿರೋಧ ಪಕ್ಷಗಳ ಇತರ ಅನೇಕ ನಾಯಕರು ಕೂಡ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ರೈತರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
ಒಂದು ವರ್ಷದಿಂದ ದೆಹಲಿಯ ಹೊರವಲಯದಲ್ಲಿ ಬೀಡುಬಿಟ್ಟಿರುವ ರೈತರು ಎಲ್ಲಾ ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳದ ಹೊರತು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹೊಸ ಕಾನೂನುಗಳು ಕೃಷಿ ವಲಯವನ್ನು ನಿಯಂತ್ರಿಸಲು ಖಾಸಗಿ ಕೈಗಳಿಗೆ ಅಧಿಕಾರವನ್ನು ನೀಡುತ್ತದೆ ಎಂದು ಅವರು ಆರೋಪಿಸಿದ್ದರು .