ಕೊಪ್ಪಳ, ನ.18 (DaijiworldNews/HR): ನಮ್ಮ ಅಪ್ಪ, ಅಮ್ಮ ರಾಜಕೀಯ ಹಿನ್ನೆಲೆಯವರೇನಲ್ಲ. ಮೈಸೂರಿನಲ್ಲಿ ಒಬ್ಬರೇ ಒಬ್ಬ ಶಾಸಕರು ಇಲ್ಲದ ಸಂದರ್ಭದಲ್ಲಿ ನನ್ನನ್ನು ಸಂಸದನಾಗಿ ಮತದಾರರು ಚುನಾಯಿಸಿದ್ದಾರೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಪ್ರಿಯಾಂಕ್ ಅಂದರೆ ಯಾವ ಲಿಂಗ, ಮರಿ ಖರ್ಗೆ ಎಂದರೆ ಏನು ತಪ್ಪು, ಸಾವಿರಾರು ಕೋಟಿ ಆಸ್ತಿ ಹೇಗೆ ಬಂತು ಎಂಬ ಸರಳ ಪ್ರಶ್ನೆ ಕೇಳಿದ್ದೆ, ಅದಕ್ಕೆ ಅವರು ಉತ್ತರಿಸುವ ಬದಲು ನೋಟಿಸ್ ಕಳುಹಿಸಿದ್ದಾರೆ. ಅದಕ್ಕೆ ಅಲ್ಲಿಯೇ ಉತ್ತರಿಸಲಾಗುವುದು" ಎಂದರು.
ಇನ್ನು ಬಿಟ್ ಕಾಯಿನ್ ಬಗ್ಗೆ ಎಲ್ಲ ಗೊತ್ತಿರುವ ಪ್ರಿಯಾಂಕ್ ಅವರಿಗೆ ನಮ್ಮ ಮೇಲೆ ಆರೋಪ ಮಾಡುವ ಬದಲು ಆತ್ಮಾವಲೋಕನ ಮಾಡಿಕೊಂಡಿದ್ದರೆ ಸಾಕಿತ್ತು" ಎಂದಿದ್ದಾರೆ.