ಅರುಣಾಚಲ, ನ.18 (DaijiworldNews/HR): ಭಾರತೀಯ ವಾಯುಪಡೆಯ ಎಂಐ-17 (Mi-17) ಹೆಲಿಕಾಪ್ಟರ್ ಇಂದು ಪತನಗೊಂಡಿದ್ದು, ಅದರಲ್ಲಿದ್ದ ಐವರು ಪ್ರಾಣ ಅಪಾಯದಿಂದ ಪಾರಾಗಿರುವ ಘಟನೆ ಅರುಣಾಚಲ ಪ್ರದೇಶದ ಪೂರ್ವ ಭಾಗದಲ್ಲಿ ನಡೆದಿದೆ.
ಸಾಂದರ್ಭಿಕ
ಈ ಹೆಲಿಕಾಪ್ಟರ್ ಸಂಪೂರ್ಣವಾಗಿ ಪತನಗೊಂಡಿರಲಿಲ್ಲ. ಬದಲಾಗಿ ಹಾರಾಟ ನಡೆಸುತ್ತಿದ್ದಾಗ ಒಮ್ಮೆಲೆ ದೋಷ ಕಾಣಿಸಿದ ಹಿನ್ನೆಲೆಯಲ್ಲಿ ಅದನ್ನು ತುರ್ತು ಭೂಸ್ಪರ್ಶ ಮಾಡಿಸಲಾಗಿದ್ದು, ಅದರಲ್ಲಿದ್ದ ಜನರಿಗೆ ಯಾವುದೇ ಅಪಾಯವಾಗಲಿಲ್ಲ.
ಇನ್ನು ಈ ಹೆಲಿಕಾಪ್ಟರ್ ದುರಸ್ತಿ ಹಂತದಲ್ಲೇ ಇದ್ದು, ಪತನಗೊಂಡಿದ್ದಕ್ಕೆ ಕಾರಣ ತಿಳಿಯಲು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.