ಬೆಂಗಳೂರು, ನ.18 (DaijiworldNews/PY): "ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಒಬ್ಬ ಹುಚ್ಚ. ಅವರಿಗೆ ಸಾಮಾನ್ಯ ಜ್ಞಾನವೇ ಇಲ್ಲ. ಅವರನ್ನು ನಿಮ್ಹಾನ್ಸ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದ್ದಾರೆ.
ಶ್ರೀಕಿಯನ್ನು ಬಳಸಿಕೊಂಡು ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯಲ್ಲಿ ಅಕ್ರಮ ಎಸಗಿರುವ ಕುರಿತು ಕಾಂಗ್ರೆಸ್ ನಾಯಕತು ತಮಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ದೂರ ಬಂದಲ್ಲಿ ತನಿಖೆ ನಡೆಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿರುವ ಬಗ್ಗೆ ಸುದ್ದಿಗಾರರಿ ಪ್ರಸ್ತಾಪಕ್ಕೆ ಡಿಕೆಶಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ ಕಾಯಿನ್ ಹಗರಣ ಕುರಿತು ಲಿಖಿತ ದೂರು ಹೋಗಿದೆ. ಇದು ಅಧಿಕೃತ ಪತ್ರ. ಅದರಲ್ಲಿ ಸಿಎಂ ಕುಟುಂಬದ ಸದಸ್ಯರು ಸೇರಿದಂತೆ ಬಿಜೆಪಿ ರಾಜ್ಯಾಧ್ಯಕ್ಷರು, ಹಲವು ಮಂತ್ರಿಗಳು, ಸಂಸತ್ ಸದಸ್ಯರ ಹೆಸರು ಹಾಗೂ ಹಲವರ ಹೆಸರುಗಳಿವೆ. ಹಗರಣದಲ್ಲಿ ಅವರು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲು ಗೃಹ ಸಚಿವರು ಈ ದೂರಿನ ಕುರಿತು ಸುಮೊಟೋ ಪ್ರಕರಣ ದಾಖಲಿಲಿ, ತನಿಖೆ ನಡೆಸಲಿ. ಬಳಿಕ ಯುವ ಕಾಂಗ್ರೆಸ್ ಬಗ್ಗೆ ಮಾತನಾಡಲಿ" ಎಂದು ಕಿಡಿಕಾರಿದ್ದಾರೆ.
ಯುವ ಕಾಂಗ್ರೆಸ್ ಚುನಾವಣೆ ನಡೆದ ವೇಳೆ ಶ್ರೀಕಿ ಜೈಲಿನಲ್ಲಿದ್ದ, ಅವನು ನಲಪಾಡ್ ಪರ ರಿಗ್ಲಿಂಗ್ಗೆ ಹೇಗೆ ಸಹಾಯ ಮಾಡಲು ಸಾಧ್ಯ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಒಬ್ಬ ಹುಚ್ಚ. ತಾನು ಏನು ಮಾತನಾಡುತ್ತೇನೆ ಎನ್ನುವುದರ ಪರಿವೇ ಇಲ್ಲ. ಹಾಗಾಗಿ ಅವರನ್ನು ಮೊದಲು ನಿಮ್ಹಾನ್ಸ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು" ಎಂದಿದ್ದಾರೆ.
ಶ್ರೀಕಿ ಜೈಲಿನದ್ದ ಸಂದರ್ಭ ಆತನಿಗೆ ಲ್ಯಾಪ್ಟಾಪ್ ಒದಗಿಸಿ ಹ್ಯಾಕಿಂಗ್ ಮಾಡಿರಬಹುದು ಎನ್ನುವ ಮಾತಿಗಳಿವೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, "ನನ್ನ ಮಗ ಜೈಲಿನಲ್ಲಿದ್ದಾಗ ಡ್ರಗ್ಸ್ ಸರಬರಾಜು ಮಾಡಿದ್ದಾರೆ ಎಂದು ಶ್ರೀಕಿ ತಂದೆ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಶ್ರೀಕಿ ಸಹ ನ್ಯಾಯಾಲಯಕ್ಕೆ ನೀಡಿರುವ ಹೇಳಿಕೆಯಲ್ಲಿ ಇದನ್ನು ಒಪ್ಪಿಕೊಂಡಿದ್ದಾನೆ. ಈ ಕುರಿತು ಕೋರ್ಟ್ ಸಹ ತನಿಖೆಗೆ ಆದೇಶಿಸಿದೆ" ಎಂದು ತಿಳಿಸಿದ್ದಾರೆ.
"ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶ್ರೀಕಿಗೆ ವೈದ್ಯಕೀ ಪರೀಕ್ಷೆ ನಡೆಸಿ ಎಂದು ಕೋರ್ಟ್ ಆದೇಶ ನೀಡಿದರೂ ಕೂಡಾ ಪರೀಕ್ಷೆ ಮಾಡಿಸಿಲ್ಲ. ಕೊರೊನಾ ಕಾರಣ ಹೇಳಿ ಬೇರೆಕಡೆ ಪರೀಕ್ಷೆ ಮಾಡಲಾಗಿದೆ. ಇದಕ್ಕೆ ಕೋರ್ಟ್ ಸಹ ಆಕ್ಷೇಪ ವ್ಯಕ್ತಪಡಿಸಿದೆ. ಜ್ಞಾನವೇ ಇಲ್ಲದ ಗೃಹ ಸಚಿವರು ಶಾಲಾ ಬಾಲಕನಂತೆ ವರ್ತಿಸುತ್ತಿದ್ದಾರೆ" ಎಂದಿದ್ದಾರೆ.