ಚಿಕ್ಕಮಗಳೂರು, ನ.18 (DaijiworldNews/HR): ಚುನಾವಣೆಗಾಗಿ ಕಾಂಗ್ರೆಸ್ ಮಾಡಿರುವ ನಾಟಕದ ಕಂಪನಿಯೇ ಬಿಟ್ ಕಾಯಿನ್. ಈ ಕಂಪನಿಗೆ ಅವರೇ ಡೈರಕ್ಟರ್, ಪ್ರೊಡ್ಯೂಸರ್, ಆಯಕ್ಟರ್ ಎಂದು ಸಚಿವ ಆರ್. ಅಶೋಕ್ ವ್ಯಂಗ್ಯ ಮಾಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ನಾಟಕವನ್ನು ಪ್ರಾರಂಭ ಮಾಡಿದ್ದು ಅವರೇ, ಅಂತ್ಯ ಹಾಡಬೇಕಿರೋದು ಅವರೇ, ಹೆಸರನ್ನೂ ಅವರೇ ಹೇಳಬೇಕು. ನಿಮಗೆ ಹೆಸರು ನೀಡಲು ಆಗುವುದಿಲ್ಲ ಅಂದ್ರೆ ನೀವು ಯಾವ ಸೀಮೆ ವಿರೋಧ ಪಕ್ಷದ ನಾಯಕರು,ಇದೆಲ್ಲಾ ಕಾಂಗ್ರೆಸ್ಸಿಗರ ನಾಟಕ, ಹಾವು ಬಿಡ್ತೀನಿ, ಹಾವು ಬಿಡ್ತೀನಿ ಅಂತ ನಾಟಕ ಮಾಡ್ತಿದ್ದಾರೆ" ಎಂದರು.
ಇನ್ನು "ಹಾವು ಬಿಡದೆ ನಾವು ಯಾವ ಹಾವೆಂದು ಹೇಗೆ ಪರೀಕ್ಷೆ ಮಾಡುವುದು? ಇದು ಕಾಂಗ್ರೆಸ್ಸಿಗರ ಸುಳ್ಳಿನ ಕಂತೆ, ಮುಂದಿನ ಚುನಾವಣೆಗೆ ತೊಂದರೆಯಾಗುತ್ತೆಂದು ಕಾಂಗ್ರೆಸ್ಸಿಗರ ಕಳ್ಳ ನಾಟಕ" ಎಂದು ಹೇಳಿದ್ದಾರೆ.