ಹೈದರಾಬಾದ್, ನ.18 (DaijiworldNews/HR): ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಅವರ ವಿರುದ್ಧ ತಮ್ಮ ಪುಸ್ತಕದಲ್ಲಿ ಆಕ್ಷೇಪಣಾರ್ಹ ವಿಷಯಗಳನ್ನು ಸೇರಿಸುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ ನೀಡಿದ ದೂರಿನ ಅನ್ವಯ, ರಿಜ್ವಿ ಮತ್ತು ಅವರ ಸಹಚರರ ವಿರುದ್ಧ 153ಎ (ಧರ್ಮವನ್ನು ಆಧರಿಸಿ ಜನರ ನಡುವೆ ದ್ವೇಷ ಬಿತ್ತುವುದು), 295ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ) ಮತ್ತಿತರ ಐಪಿಸಿ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಪ್ರವಾದಿ ಮೊಹಮ್ಮದ್ ಅವರನ್ನು ಅನುಸರಿಸುವ ಮತ್ತು ಇಸ್ಲಾಮಿಕ್ ತತ್ವಗಳನ್ನು ಪಾಲಿಸುವವರ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ರೀತಿಯಲ್ಲಿ ಪುಸ್ತಕ ಇದೆ ಎಂದು ಒವೈಸಿ ದೂರಿದ್ದಾರೆ.