ಬೆಂಗಳೂರು, ನ.18 (DaijiworldNews/HR): ರಾಜ್ಯದ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಮಾತ್ರ ಶೇ.100ರಷ್ಟು ಪೂರ್ಣ ಪಠ್ಯಗಳಿಗೆ ಹೆಚ್ಚು ಒತ್ತು ನೀಡುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶೇ.100ರಷ್ಟು ಪೂರ್ಣ ಪಠ್ಯಗಳಿಗೆ ಗಣಿತ ಮತ್ತು ವಿಜ್ಞಾನ ಸಬ್ಜೆಕ್ಟ್ ಗಳಿಗೆ ಒತ್ತು ಕೊಡುತ್ತೇವೆ. ಉಳಿದ ವಿಷಯಗಳಲ್ಲಿ ಶೇ.100ರಷ್ಟು ಪಠ್ಯಗಳ ಬಗ್ಗೆ ಒತ್ತು ನೀಡ್ತಿಲ್ಲ. ಶೇ.100ರಷ್ಟು ಪಠ್ಯಕ್ಕೆ ಒತ್ತು ಕೊಡುವಂತ ವಿಷಯಗಳ ಪಠ್ಯಪುಸ್ತಕ ಪೂರೈಕೆಯಲ್ಲಿ ತೊಂದರೆ ಆದ್ರೇ.. ಮುಂದಿನ ತರಗತಿಗಳಿಗೆ ತೊಂದರೆ ಆಗಲಿದೆ" ಎಂದರು.
ಇನ್ನು ರಾಜ್ಯದಲ್ಲಿ ಕೊರೊನಾದಿಂದಾಗಿ ತಡವಾಗಿ ಶಾಲಾ-ಕಾಲೇಜು ಆರಂಭಗೊಂಡಿದ್ದು, ಕೆಲ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಪಠ್ಯಕ್ರಮ ಬೋಧನೆ ಶೇ.15ರಷ್ಟು ಆಗಿಲ್ಲ. ದ್ವಿತೀಯ ಪಿಯುಸಿಯಲ್ಲಿ ಶೇ.15 ರಿಂದ 20ರಷ್ಟು ಬೋಧನೆ ಮಾಡಲಾಗಿಲ್ಲ" ಎಂದಿದ್ದಾರೆ.