ಜೈಪುರ, ನ 17 (DaijiworldNews/MS): ಬೆಳ್ಳಿಯ ಕಾಲುಂಗುರ ಹಾಗೂ ಕಾಲ್ಗೆಜ್ಜೆ ದರೋಡೆ ನಡೆಸಲು ಮಹಿಳೆಯೋರ್ವಳ ಪಾದಗಳನ್ನು ಕೊಚ್ಚಿ ಹಾಕಿ ಆಕೆಯನ್ನು ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯಲ್ಲಿ ನಡೆದಿದೆ.
ರಾಜ್ಸಮಂದ್ ಜಿಲ್ಲೆಯ ಹೊಲವೊಂದರಲ್ಲಿ ಕೊಚ್ಚಿ ಹಾಕಿದ ಪಾದಗಳೊಂದಿಗೆ 45 ವರ್ಷದ ಮಹಿಳೆಯ ಶವ ಪತ್ತೆ ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರ ಪ್ರಕಾರ, ಘಟನೆಯ ಸಮಯದಲ್ಲಿ ಅವಳು ಧರಿಸಿದ್ದ ಬೆಳ್ಳಿಯ ಕಾಲುಂಗುರವನ್ನು ದರೋಡೆ ನಡೆಸಲು ಕಳ್ಳ ಮಹಿಳೆಯ ಪಾದಗಳನ್ನು ಕತ್ತರಿಸಿದ್ದಾನೆ.
ಮಾತ್ರವಲ್ಲದೆ ಆರೋಪಿಯು ಮಹಿಳೆಯ ಕುತ್ತಿಗೆಯ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ಕಂಕುಬಾಯಿ ಎಂದು ಗುರುತಿಸಲಾಗಿದೆ. ಕಳೆದ ತಿಂಗಳು ಜೈಪುರ ಜಿಲ್ಲೆಯ ಖತೇಪುರ ಗ್ರಾಮದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು.