ಮುಂಬೈ, ನ.17 (DaijiworldNews/PY): ಅಂಗಡಿ ಮಾಲೀಕನೋರ್ವನನ್ನು ದರೋಡೆಕೋರರು ಕತ್ತಿಯಿಂದ ಕಡಿದು ಕೊಂದ ಘಟನೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಂಗಡಿ ಮಾಲೀಕನನ್ನು ಕಮಲೀಶ್ ಪೋಪಟ್ ಎಂದು ಗುರುತಿಸಲಾಗಿದೆ.
ಕಮಲೀಶ್ ಅವರು ಅಂಗಡಿಯನ್ನು ಮುಚ್ಚಿ ಮನೆಗೆ ಹೋಗಲು ತಯಾರಿ ನಡೆಸುತ್ತಿದ್ದ ಸಂದರ್ಭ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಅಂಗಡಿಯೊಳಕ್ಕೆ ಪ್ರವೇಶಿಸಿದ್ದಾರೆ. ಅಂಡಿ ಮಾಲೀಕ ದಾಳಿಕೋರ ವಿರಿದ್ದ ಹೋರಾಡಲು ಯತ್ನಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಮುಸುಕುಧಾರಿಗಳು ಆತನ ಮೇಲೆ ಕತ್ತಿಯಿಂದ ಕಡಿದು ಹತ್ಯೆಗೈದಿದ್ದಾರೆ.
ಅಂಗಡಿ ಮಾಲೀಕನನ್ನು ಹತ್ಯೆಗೈದ ಬಳಿಕ ಅಂಗಡಿಯಿಂದ ಕದ್ದ ಹಣ ಹಾಗೂ ಇತರ ಬೆಲೆಬಾಳುವ ವಸ್ತುಗಳೊಂದಿಗೆ ಬೈಕ್ನಲ್ಲಿ ಪರಾರಿಯಾಗಿದ್ದಾರೆ.