ತುಮಕೂರು, ನ.17 (DaijiworldNews/PY): "2016ರಲ್ಲೇ ಬಿಟ್ ಕಾಯಿನ್ ಪ್ರಕರಣ ಇತ್ತು. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಬಿಟ್ ಕಾಯಿನ್ ಪ್ರಕರಣದಲ್ಲಿ ಶ್ರೀಕಿ ಇದ್ದ" ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ಧಾರೆ.
ಕೊರಟಗೆರೆಯಲ್ಲಿ ಮಾತನಾಡಿದ ಅವರು, "ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಆರಂಭಿಕ ಹಂತದ ಚರ್ಚಯಾಗುತ್ತಿದೆ. ಈ ಬಗ್ಗೆ ಏನಾಗುತ್ತದೆ ಎಂದು ಕಾದು ನೋಡೋಣ" ಎಂದಿದ್ದಾರೆ.
"ಬಿಟ್ ಕಾಯಿನ್ ಪ್ರಕರಣ 2016ರಲ್ಲೇ ಇತ್ತು. ಬಿಟ್ ಕಾಯಿನ್ ಪ್ರಕರಣ ಸಂಬಂಧ ಕಾನೂನು ಹೋರಾಟ ಮಾಡುವುದು ಪ್ರಯೋಜನವಿಲ್ಲ. ಪ್ರಕರಣದ ಕುರಿತು ಆರಂಭಿಕ ಹಂತದ ಚರ್ಚೆಯಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಬಿಟ್ ಕಾಯಿನ್ ಹಗರಣದ ಬಗ್ಗೆ ಬರೀ ಗೊಂದಲ ಎಬ್ಬಿಸಲಾಗುತ್ತಿದೆ. ಯಾರ ಬಳಿಯೂ ನಿಖರ ಮಾಹಿತಿ ಇಲ್ಲ" ಎಂದಿದ್ದಾರೆ.