ಬೆಂಗಳೂರು, ನ.17 (DaijiworldNews/PY): "ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದವರು, ನಮಗೆ ತಲೆ ಕತ್ತರಿಸುವುದು ಗೊತ್ತು, ತಲೆ ತಗ್ಗಿಸುವುದು ತಿಳಿದಿಲ್ಲ" ಎಂದು ಕಾಂಗ್ರೆಸ್ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, "ನೀವು ಟಿಪ್ಪು ಸುಲ್ತಾನ್ ನೆಲದಿಂದ ಬಂದವರು, ನಮಗೆ ತಲೆ ಕತ್ತರಿಸುವುದು ಗೊತ್ತು, ತಲೆ ತಗ್ಗಿಸುವುದು ತಿಳಿದಿಲ್ಲ. ನಿಮಗೆ ತಲೆ ತಗ್ಗಿಸುವುದಕ್ಕೆ ತಿಳಿದಿಲ್ಲ. ತಲೆ ಎತ್ತುವುದು ತಿಳಿದಿದೆ" ಎಂದಿದ್ದಾರೆ.
ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡಿರುವ ಇಮ್ರಾನ್ ಪ್ರತಾಪ್ ಗಡಿ, "ಹೈದರಾಬಾದ್ನಲ್ಲಿ ಶಾಹಿನ್ ಭಾಗ್ ಮಾದರಿ ಹೋರಾಟ ಏಕಿಲ್ಲ" ಎಂದು ಕೇಳಿದ್ದರು.
"ಅಧಿಕಾರಕ್ಕಾಗಿ ಆಡಳಿತಶಾಹಿ ಆಥವಾ ಕಾರ್ಯಾಂಗವನ್ನ ಮುಸ್ಲಿಂಮರು ವಶಕ್ಕೆ ಪಡೆದುಕೊಳ್ಳಬೇಕು" ಎಂದು ಹೇಳಿಕೆ ನೀಡಿದ್ದರು.