ಮುಂಬೈ, ನ 17 (DaijiworldNews/MS): ಚರಂಡಿಯಲ್ಲಿ ಪತ್ತೆಯಾದ ನವಜಾತ ಹಸುಳೆಯನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ.
ಮುಂಬೈ ಪೊಲೀಸರ ಟ್ವೀಟ್ ಪ್ರಕಾರ, ಮುಂಬೈ ನಪಂತ್ನಗರದ ಬಳಿ ಬೆಕ್ಕುಗಳ ಹಿಂಡು ಸೇರಿ ಕಚ್ಚಾಟ ಗದ್ದಲ ಮಾಡುತ್ತಿತ್ತು. ಈ ವೇಳೆ ಹತ್ತಿರದ ನಿವಾಸಿಗಳು ಬೆಕ್ಕುಗಳ ಹಿಂಡು ಓಡಿಸಲು ಮುಂದಾಗಿದ್ದಾರೆ. ಆದರೆ ಅಲ್ಲಿ ಚರಂಡಿಯಲ್ಲಿ ಬಟ್ಟೆಯಲ್ಲಿ ಸುತ್ತಿದ ಮಗು ಇರುವುನ್ನು ಕಂಡು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣವೇ ಸ್ಥಳೀಯರು ಪಂತ್ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಮುಂಬೈ ಪೊಲೀಸ್ನ ನಗರದ ಅಪರಾಧ ತಾಣಗಳಲ್ಲಿ ಗಸ್ತು ತಿರುಗುವ ನಿರ್ಭಯಾ ಸ್ಕ್ವಾಡ್ ಆಗಮಿಸಿ ರಕ್ಷಿಸಿದೆ.
ಮಗುವನ್ನು ಪಂತನಗರ ಪೊಲೀಸ್ ಠಾಣೆಯ ನಿರ್ಭಯಾ ಸ್ಕ್ವಾಡ್ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈಗ ಸುರಕ್ಷಿತವಾಗಿದ್ದು ಚೇತರಿಸಿಕೊಳ್ಳುತ್ತಿದೆ" ಎಂದು ಮಗುವಿನೊಂದಿಗೆ ಅಧಿಕಾರಿಗಳ ಚಿತ್ರದ ಜೊತೆಗೆ ಪೋಸ್ಟ್ ಮಾಡಿದ ಟ್ವೀಟ್ನಲ್ಲಿ ಪೊಲೀಸರು ತಿಳಿಸಿದ್ದಾರೆ
ಮಗುವಿನ ಪೋಷಕರು ಅಥವಾ ಅದನ್ನು ಎಸೆದ ವ್ಯಕ್ತಿಗಳ ಗುರುತು ಇನ್ನೂ ತಿಳಿದಿಲ್ಲ.