ಪೂಂಚ್ ,ನ 17 (DaijiworldNews/MS): ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪೊಲೀಸ್ ವಾಹನ ಸ್ಕಿಡ್ ಆಗಿ ನದಿಗೆ ಉರುಳಿದ ಪರಿಣಾಮ ಇಬ್ಬರು ಪೊಲೀಸ್ ಸಿಬ್ಬಂದಿ ಮೃತಪಟ್ಟು, ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬುಫ್ಲಿಯಾಜ್ ಪ್ರದೇಶದ ಡ್ರೋಗ್ಜಿಯಾನ್ ಗ್ರಾಮದಲ್ಲಿ ಪೂಂಚ್ನ ಹಿರಿಯ ಪೊಲೀಸ್ ಅಧೀಕ್ಷಕರ ಬೆಂಗಾವಲು ವಾಹನ ಇದಾಗಿದ್ದು ಇದರ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿದ್ದ ಆರು ಪೊಲೀಸರನ್ನು ರಕ್ಷಿಸಿ ಸುರನ್ಕೋಟೆಯ ಉಪ-ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಈ ಪೈಕಿ ಓರ್ವ ಪೊಲೀಸ್ ಆಸ್ಪತ್ರೆಗೆ ಹೋಗುವಾಗಲೇ ಮೃತಪಟ್ಟಿದ್ದು, ಉಳಿದ ಐವರನ್ನು ರಾಜೌರಿ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅಲೂ ಇನ್ನೊಬ್ಬ ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಲೇ ಮೃತರಾಗಿದ್ದಾರೆ.
ಎಸ್ಎಸ್ಪಿ ಪೂಂಚ್ ವಿನೋದ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಪೀರ್ ಕಿ ಗಲಿಯಿಂದ ಮೊಘಲ್ ರಸ್ತೆಯ ಮೂಲಕ ಹಿಂದಿರುಗುತ್ತಿತ್ತು, ಅಲ್ಲಿ ಅವರು ಜಮ್ಮುವಿಗೆ ಭೇಟಿ ನೀಡಿದ ವಿಭಾಗೀಯ ಆಯುಕ್ತ ರಾಘವ್ ಲಾಂಗರ್ಗೆ ಭದ್ರತೆಯನ್ನು ಒದಗಿಸಲು ಹೋಗಿದ್ದರು. ಅದಾದ ಬಳಿಕ ಪೀರ್ ಕಿ ಗಲಿಯಿಂದ ಮೊಘಲ್ ರಸ್ತೆಯಲ್ಲಿ ಈ ಬೆಂಗಾವಲು ವಾಹನಗಳೆಲ್ಲ ಹಿಂತಿರುಗುತ್ತಿತ್ತು.