ಕೊಟ್ಟಾಯಂ, ನ.16 (DaijiworldNews/HR): ಸಾಕ್ಷರತೆ ವಿಚಾರದಲ್ಲಿ ನಂಬರ್ 1 ಸ್ಥಾನದಲ್ಲಿರುವ ಕೇರಳದಲ್ಲಿ ಸಾಕ್ಷತರಾ ಪರೀಕ್ಷೆ ಪ್ರತಿವರ್ಷವೂ ನಡೆಯುತ್ತಿದ್ದು, ಇದೀಗ 104 ವರ್ಷದ ವೃದ್ಧೆಯೊಬ್ಬರು ಈ ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಕೊಟ್ಟಾಯಂ ಜಿಲ್ಲೆಯ ಆಯರಕುನ್ನಂ ಪಂಚಾಯಿತಿಯು ಈ ಪರೀಕ್ಷೆ ನಡೆದಿದ್ದು, ಕೇರಳ ರಾಜ್ಯ ಸಾಕ್ಷರತಾ ಮಿಷನ್ ಅಡಿಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ.
ಈ ಪರೀಕ್ಷೆಯಲ್ಲಿ ಕುಟ್ಟಿಯಮ್ಮ ಎನ್ನುವ ವೃದ್ಧೆ 100ಕ್ಕೆ 89 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಮನೆಯಿಂದಲೇ ಸಾಕ್ಷರತಾ ಪರೀಕ್ಷೆಯಲ್ಲಿ ಅವರು ಭಾಗವಹಿಸಿದ್ದರು. ಈ ಪರೀಕ್ಷೆಯು ಸಾಮಾನ್ಯವಾಗಿ ನಾಲ್ಕನೇ ತರಗತಿಯ ಗುಣಮಟ್ಟವನ್ನು ಹೊಂದಿರುತ್ತದೆ. ಅದರಂತೆ ಪರೀಕ್ಷೆ ಬರೆದಿದ್ದಾರೆ.
ಇನ್ನು ಸಂತೋಷವನ್ನು ವ್ಯಕ್ತಪಡಿಸಿದ ಕುಟ್ಟಿಯಮ್ಮ, ಶಿಕ್ಷಕಿಯಾಗಿರುವ ರೆಹ್ನಾ ನನಗೆ ಮಲಯಾಳಂನಲ್ಲಿ ಅಕ್ಷರಗಳನ್ನು ಬರೆಯಲಿ ಹೇಳಿಕೊಟ್ಟಿದ್ದು, ಕೆಲ ವರ್ಷಗಳ ಹಿಂದೆ ಪತಿ ತೀರಿಕೊಂಡ ಮೇಲೆ ಒಂಟಿಯಾಗಿದ್ದ ನನಗೆ ಅಕ್ಷರ ಕಲಿಯುವ ಹಂಬಲವಾಗಿ ನಾನು ಓದುವುದನ್ನು ಬರೆಯುವುದನ್ನು ಕಲಿತಿದ್ದೇನೆ" ಎಂದಿದ್ದಾರೆ.