ಬಿಹಾರ, ನ 16 (DaijiworldNews/MS): ಲಖಿಸರಾಯ್ ಜಿಲ್ಲೆಯಲ್ಲಿ ಪಿಪ್ರಾ ಗ್ರಾಮದ ಶೇಖ್ಪುರ-ಸಿಕಂದ್ರ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಐವರು ಸಂಬಂಧಿಕರು ಸಾವನ್ನಪ್ಪಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ನವೆಂಬರ್ 16 ರಂದು ಬೆಳಿಗ್ಗೆ 6:10 ರ ಸುಮಾರಿಗೆ ಶೇಖ್ಪುರ-ಸಿಕಂದ್ರ ರಸ್ತೆಯಲ್ಲಿ ಎಸ್ಯುವಿ ಟ್ರಕ್ಗೆ ಢಿಕ್ಕಿ ಹೊಡೆದ ಪರಿಣಾಮ 6 ಜನ ಸಾವನ್ನಪ್ಪಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಈ ಅಪಘಾತದಲ್ಲಿ ಸುಶಾಂತ್ ರಜಪೂತ್ ಅವರ ಸೋದರ ಮಾವ ಆಗಿರುವ ಹರಿಯಾಣ ಕೇಡರ್ ಐಪಿಎಸ್ ಅಧಿಕಾರಿ ಓಂ ಪ್ರಕಾಶ್ ಸಿಂಗ್ ಅವರ ನಾಲ್ವರು ಸಂಬಂಧಿಕರು ಸಾವನ್ನಪ್ಪಿದ್ದಾರೆ.ಓಂಪ್ರಕಾಶ್ ಸಿಂಗ್ ಅವರ ಸಹೋದರಿಯ ಅಂತಿಮ ಸಂಸ್ಕಾರ ಮುಗಿಸಿ ಬರುತ್ತಿರುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅವರು ಅಂತಿಮ ವಿಧಿಗಳಲ್ಲಿ ಭಾಗವಹಿಸಿ ಪಾಟ್ನಾದಿಂದ ತಮ್ಮ ಮನೆಗೆ ಮರಳುತ್ತಿದ್ದ ವೇಳೆ ಅವರ ಕಾರು ಲಖಿಸರಾಯ್ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿದೆ. ಓಂ ಪ್ರಕಾಶ್ ಸಿಂಗ್ ಸುಶಾಂತ್ ಸಿಂಗ್ ಅವರ ಸಹೋದರ ಮಾವ ಆಗಿದ್ದಾರೆ.
ಇವರು ಹರಿಯಾಣದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸಹೋದರಿ ಗೀತಾ ದೇವಿಯ ಅಂತಿಮ ವಿಧಿ ವಿಧಾನಕ್ಕೆ ತೆರಳಲಾಗಿತ್ತು. ವಾಹನದಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡರು. ಗಾಯಗೊಂಡವರಲ್ಲಿ ಇಬ್ಬರನ್ನು ಜಮುಯಿಗೆ , ಇಬ್ಬರನ್ನು ಪಾಟ್ನಾದ ಆಸ್ಪತ್ರೆಗೆ ಸಾಗಿಸಲಾಗಿದೆ.ಎಸ್ಯುವಿ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಮೃತರನ್ನು ಲಾಲ್ಜಿತ್ ಸಿಂಗ್, ನೇಮಾನಿ ಸಿಂಗ್, ರಾಮಚಂದ್ರ ಸಿಂಗ್, ಬೇಬಿ ಸಿಂಗ್, ಅನಿತಾ ಸಿಂಗ್ ಮತ್ತು ಪ್ರೀತಮ್ ಸಿಂಗ್ ಎಂದು ಗುರುತಿಸಲಾಗಿದೆ. ಇವರೆಲ್ಲಾ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಗಳಾಗಿದ್ದು, ಎಲ್ಲರೂ ಸಂಬಂಧಿಕರಾಗಿದ್ದಾರೆ.