ರಾಜ್ಕೋಟ್, ನ.16 (DaijiworldNews/HR): ದಿಯುನಲ್ಲಿ ಪ್ಯಾರಾಸೈಲಿಂಗ್ ಮಾಡುವಾಗ ಪ್ಯಾರಾಚೂಟ್ನ ಹಗ್ಗ ತುಂಡಾಗಿ ದಂಪತಿಗಳು ಸಮುದ್ರಕ್ಕೆ ಬಿದ್ದು, ಲೈಫ್ ಜಾಕೆಟ್ ಹಾಕಿಕೊಂಡಿದ್ದ ದಂಪತಿಯನ್ನು ಬೀಚ್ನಲ್ಲಿ ನಿಯೋಜಿಸಲಾಗಿದ್ದ ಜೀವರಕ್ಷಕರು ರಕ್ಷಿಸಿರುವ ಘಟನೆ ನಡೆದಿದೆ.
ಅಜಿತ್ ಕಥಾಡ್ ಮತ್ತು ಅವರ ಪತ್ನಿ ಸರಳಾ ಪ್ಯಾರಾಸೈಲಿಂಗ್ ಮಾಡುವಾಗ ಈ ವಿಡಿಯೋವನ್ನು ಅವನ ಅಣ್ಣ ರಾಕೇಶ್ ರೆಕಾರ್ಡ್ ಮಾಡುತ್ತಿದ್ದು, ಅವರು ತಕ್ಷಣ ನೀರಿಗೆ ಬಿಳುತ್ತಿರುವುದನ್ನು ಕಂಡು ಗಾಬರಿಯಿಂದ ಕಿರುಚಿದ್ದಾರೆ. ತಕ್ಷಣ ಅವರನ್ನು ರಕ್ಷಿಸಿ ದಡಕ್ಕೆ ಸೇರಿಸಲಾಯಿತು.
ಈ ಕುರಿತು ರಾಕೇಶ್ ಮಾಹಿತಿ ನೀಡಿದ್ದು,"ನಾನು ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದೆ ಮತ್ತು ಹಗ್ಗ ಮುರಿದಾಗ ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ. ನನ್ನ ಸಹೋದರ ಮತ್ತು ಅತ್ತಿಗೆ ನೀರಿಗೆ ಬೀಳುತ್ತಿರುವುದನ್ನು ನಾನು ನೋಡಿದೆ ಆದರೆ ನಾನು ಆಗ ಅಸಹಾಯಕನಾಗಿದ್ದೆ ಎಂದು ತಿಳಿಸಿದ್ದಾರೆ.
ಪಾಮ್ಸ್ ಅಡ್ವೆಂಚರ್ ಮತ್ತು ವಾಟರ್ ಸ್ಪೋರ್ಟ್ಸ್ ಮಾಲೀಕ ಮೋಹನ್ ಲಕ್ಷ್ಮಣ್ ಮಾಹಿತಿ ನೀಡಿ "ಭಾನುವಾರ ಭಾರಿ ಗಾಳಿ ಬೀಸಿದ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ. ಮೂರು ವರ್ಷಗಳ ಹಿಂದೆ ಈ ರೀತಿಯ ಘಟನೆ ಸಂಭವಿಸಿತ್ತು. ನಾವು ಸಾಮಾನ್ಯವಾಗಿ ಗೋವಾದಲ್ಲಿ ಶಿಕ್ಷಣ ಪಡೆದಿರುವ ನಿಯಮಗಳ ಪ್ರಕಾರ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಉತ್ತಮ ತರಬೇತಿ ಪಡೆದ ಉದ್ಯೋಗಿಗಳನ್ನು ಹೊಂದಿದ್ದೇವೆ" ಎಂದರು.