ನವದೆಹಲಿ, ನ.16 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಗಳಿಗೆ ಹೆಚ್ಚು ಜನಸಂಖ್ಯೆ ಸೇರಿಸಲು ಉತ್ತರ ಪ್ರದೇಶ ಸರ್ಕಾರ ಸಾರ್ವಜನಿಕರ ಹಣವನ್ನು ಖರ್ಚು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಹಾಗೂ ಅಮಿತ್ ಅವರ ರ್ಯಾಲಿಗೆ ಜನರನ್ನು ಸೇರಿಸಲು ಅಧಿಕಾರಿಗಳು ಸಾರ್ವಜನಿಕರ ಹಣವನ್ನು ಎದುರು ನೋಡುತ್ತಿದ್ದಾರೆಂಬ ಮಾಧ್ಯಮಗಳ ಪ್ರಕಟಿಸುತ್ತಿರುವ ಸುದ್ದಿಗಳ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿಯವರು, "ಲಾಕ್ಡೌನ್ ಸಂದರ್ಭದಲ್ಲಿ ಲಕ್ಷಾಂತರ ಕಾರ್ಮಿಕರು ದೆಹಲಿಯಿಂದ ಉತ್ತರಪ್ರದೇಶದಲ್ಲಿರುವ ಗ್ರಾಮಗಳಿಗೆ ಕಾಲ್ನಡಿಗೆ ಮೂಲಕ ಬರುತ್ತಿದ್ದಾಗ ಅವರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಆಗಿಲಿಲ್ಲ. ಆದರೆ ಇದೀಗ ತಮ್ಮ ರ್ಯಾಲಿಗಳಿಗೆ ಜನರ ಸೇರಿಸಲು ಸಾರ್ವಜನಿಕರ ಕಷ್ಟದ ಹಣವನ್ನು ಬಳಕೆ ಮಾಡುತ್ತಿದ್ದಾರೆ" ಎಂದಿದ್ದಾರೆ.
ಇನ್ನು ಉತ್ತರ ಪ್ರದೇಶದ ಪ್ರತಿ ಹಳ್ಳಿಯಲ್ಲೂ ಬಿಜೆಪಿ ಬಗ್ಗೆ ತೀವ್ರ ಅಸಮಾಧಾನವಿದ್ದು, ಇದೀಗ ಬಿಜೆಪಿಯ ರಾಜಕೀಯ ಪ್ರತಿಯೊಬ್ಬರಿಗೂ ಅರ್ಥವಾಗಿದೆ ಎಂದು ಹೇಳಿದ್ದಾರೆ.