ನವದೆಹಲಿ,ನ.16 (DaijiworldNews/HR): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಸಮೂಹ ಐಆರ್ಇಒ ಅಧ್ಯಕ್ಷ ಲಲಿತ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
ರಿಯಾಲ್ಟರ್ ಅವರನ್ನು ಕಳೆದ ವಾರ ದೇಶದಿಂದ ವಿಮಾನದಲ್ಲಿ ತೆರಳುವಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಹಣಕಾಸು ಅಪರಾಧಗಳ ತನಿಖೆ ನಡೆಸುವ ಜಾರಿ ನಿರ್ದೇಶನಾಲಯವು ಗೋಯಲ್ ವಿರುದ್ಧ ಲುಕ್ ಔಟ್ ಸುತ್ತೋಲೆಯನ್ನು ಹೊರಹಾಕಿತ್ತು.
ಇನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದ ಬಗ್ಗೆ ಐಆರ್ ಇಒ 2010ರಿಂದ ತನಿಖೆಯಲ್ಲಿದೆ.
ಈ ಪ್ರಕರಣದಲ್ಲಿ ಇದೀಗ ರಿಯಲ್ ಎಸ್ಟೇಟ್ ಸಮೂಹ ಐಆರ್ಇಒ ಅಧ್ಯಕ್ಷ ಲಲಿತ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.