ಬೆಂಗಳೂರು, ನ.16 (DaijiworldNews/HR): ದೇಶದಲ್ಲಿ ಇದುವರೆಗೂ ನಡೆದಿರುವ ಯಾವುದೇ ಹಗರಣಗಳು ತಾರ್ಕಿಕ ಅಂತ್ಯ ಕಂಡಿಲ್ಲ ಹಾಗೂ ತಪ್ಪಿಗೆ ಇಲ್ಲಿಯವರೆಗೆ ಶಿಕ್ಷೆ ದೊರೆತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಜನ್ ಧನ್ ಖಾತೆಯಿಂದ 6,000 ಕೋಟಿ ರೂ.ಗಳನ್ನು ವಂಚಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕುಮಾರಸ್ವಾಮಿ ಅವರಿಗೆ ನೋಟಿಸ್ ಜಾರಿ ಮಾಡಬೇಕು ಎಂಬ ಸಂಸದ ಪ್ರತಾಪ್ ಸಿಂಹ ಅವರ ಸಲಹೆಗೆ ಅವರು ಪ್ರತಿಕ್ರಿಯಿಸಿದ ಅವರು, "ನಾನು ಈ ವಿಷಯವನ್ನು ಎತ್ತಿದ್ದರಿಂದ ಅದು ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಸತ್ಯಾಸತ್ಯತೆ ಹೊರತರಲು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ" ಎಂದರು.
ಇನ್ನು ಎಲ್ಲಾ ದೊಡ್ಡ ಹಗರಣಗಳಗಳಲ್ಲಿ ಸಣ್ಣ ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗುತ್ತದೆ ಮತ್ತು ದೊಡ್ಡ ವ್ಯಕ್ತಿಗಳು ತಪ್ಪಿಸಿಕೊಳ್ಳುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಳ್ಳಾರಿ ಗಣಿಗಾರಿಕೆ ಲಂಚ ವಿಚಾರದಲ್ಲಿ 150 ಕೋಟಿ ರೂ.ಗಳ ಆಧಾರ ರಹಿತ ಆರೋಪ ಮಾಡಿದ್ದರ, ಆದರೆ ಅಂತಹ ಯಾವುದೇ ಹಗರಣಗಳು ನಡೆದಿಲ್ಲ" ಎಂದು ಹೇಳಿದ್ದಾರೆ.