ನವದೆಹಲಿ, ನ.15 (DaijiworldNews/HR): ನಕಲಿ ಡ್ರೈವಿಂಗ್ ಲೈಸೆನ್ಸ್ ಆಧಾರದ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದ 12 ಜನ ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
2007ರಲ್ಲಿ ದೆಹಲಿ ಪೊಲೀಸ್ ಇಲಾಖೆಗೆ ಪಿಸಿಆರ್ ಡ್ರೈವರ್ಗಳಾಗಿ ಇವರನ್ನು ನೇಮಿಸಿಕೊಳ್ಳಲಾಗಿದ್ದು,ಆ ಸಮಯದಲ್ಲಿ 12 ಜನರು ನಕಲಿ ಡಿಎಲ್ಗಳನ್ನು ಸಲ್ಲಿಸಿದ್ದರು.
ಇನ್ನು 2012ರಲ್ಲಿ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬನ ಡಿಎಲ್ನ ಸಿಂಧುತ್ವ ಪರೀಕ್ಷೆ ಮಾಡಿದಾಗ ಮೂಡಿದ ಅನುಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.