ಬೆಂಗಳೂರು, ನ.15 (DaijiworldNews/HR): ಮಾನ್ಯ ಸುಳ್ಳುರಾಮಯ್ಯ ಅವರೇ, ರಾಜ್ಯದ ಜನರು ನಿಮ್ಮಂತ ಸುಳ್ಳುಗಾರರನ್ನು ಇದುವರೆಗೆ ಕಂಡಿಲ್ಲ. 2013 ರಿಂದಲೂ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಲೇ ಬಂದಿದ್ದೀರಿ. ನುಡಿದಂತೆ ನಡೆಯಿರಿ ಎಂದರೆ ಇನ್ನೊಂದು ಚುನಾವಣೆಯವರೆಗೆ ತಡೆಯಿರಿ ಎನ್ನುತ್ತೀರಿ. ಇದಕ್ಕಾಗಿಯೇ ಬುರುಡೆರಾಮಯ್ಯ ಎನ್ನುವುದು ಎಂದು ಬಿಜೆಪಿಯು ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕದ ಬಿಜೆಪಿ, "ಪಕ್ಷಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಸಿದ್ದರಾಮಯ್ಯ ಕರೆಕೊಟ್ಟಿದ್ದಾರೆ. ಪಕ್ಷಕ್ಕೆ ಬರುವ ಯುವಕರಿಗೆ ಸ್ಥಾಪಿತ ಹಿತಾಸಕ್ತಿಗಳ ಕೂಟದಲ್ಲಿ ಯಾವ ಸ್ಥಾನ ನೀಡುತ್ತೀರಿ? ಇದೇ ನಮ್ಮ ಕೊನೆಯ ಚುನಾವಣೆ ಎನ್ನುತ್ತಲೇ ನೀವು ಮೂರು ಬಾರಿ ಚುನಾವಣೆಗೆ ನಿಂತಿರಿ. ಕಾಂಗ್ರೆಸ್ ನಲ್ಲಿ ಹೊಸಬರಿಗೆ ಅವಕಾಶ ಸಾಧ್ಯವೇ?" ಎಂದು ಪ್ರಶ್ನಿಸಿದೆ.
ಇನ್ನು ಮಾನ್ಯ ಸಿದ್ದರಾಮಯ್ಯನವರೇ, ಪ್ರಧಾನಿಯ ಸೈದ್ಧಾಂತಿಕ ಹಿನ್ನೆಲೆಯನ್ನು ನೀವು ಪ್ರಶ್ನೆ ಮಾಡಿದ್ದೀರಿ. ಹಾಗಾದರೆ ನಿಮ್ಮ ಸಿದ್ಧಾಂತ ಯಾವುದು? ಜೆಡಿಎಸ್ ಪಕ್ಷದಲ್ಲಿದ್ದಾಗ ದೇವೇಗೌಡರು, ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಸೋನಿಯಾ ಗಾಂಧಿ, ಮತರಾಜಕಾರಣಕ್ಜೆ ಟಿಪ್ಪು ಎನ್ನುವುದೇ ನಿಮ್ಮ ಸಿದ್ಧಾಂತವಲ್ಲವೇ? ಎಂದು ಕಿಡಿಕಾರಿದೆ.