ನವದೆಹಲಿ, ನ.15 (DaijiworldNews/PY): "ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಯ ಮುನ್ನೋಟಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ವೋಕಲ್ ಫಾರ್ ಲೋಕಲ್ ಮಂತ್ರವು ಪರಿಣಾಮಕಾರಿ ಕಾರ್ಯತಂತ್ರವಾಗಲಿದೆ ಎನ್ನುವುದು ಸಾಬೀತಾಗಿದೆ" ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.
ಪ್ರಗತಿ ಮೈದಾನದಲ್ಲಿ ಭಾರತ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಆಯೋಜಿಸಲಾಗಿರುವ ಹುನಾರ್ ಹಾತ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, "ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ ನಮ್ಮ ಅನ್ನದಾತರ ಪಠಿಣ ಪರಿಶ್ರಮ ಹಾಗೂ ಆತ್ಮನಿರ್ಭರ ಸ್ವಾವಲಂಬಿ ಕೃಷಿ ಹಾಗೂ ರೈತರನ್ನು ಖಚಿತಪಡಿಸಿಕೊಳ್ಳುವ ಮೋದಿ ಸರ್ಕಾರದ ಪ್ರಧಾನಿ ಮೋದಿ ಸರ್ಕಾರದ ಯತ್ನಗಳ ಫಲಿತಾಂಶ" ಎಂದಿದ್ದಾರೆ.
"ಕೊರೊನಾ ಬಿಕ್ಕಟ್ಟಿನ ವೇಳೆ ಆಂತರಿಕ ಉತ್ಪದನಾ ಸಾಮರ್ಥ್ಯ ದೇಶೀಯ ಅವಶ್ಯಕತೆಗಳನ್ನು ಪೂರೈಕೆ ಮಾಡಿತ್ತು. ಭಾರತೀಯ ಆರ್ಥಿಕತೆ ಸುರಕ್ಷಾ ಕವಚವಾಯಿ" ಎಂದು ಹೇಳಿದ್ದಾರೆ.
"ಭಾರತವು ಆಹಾರ ಧಾನ್ಯಗಳಿಗಾಗಿಯೂ ವಿದೇಶೀಯ ಆಮದು ಮೇಲೆ ಅವಲಂಬಿತವಾಗಿತ್ತು. ಈಗ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಭಾರತವು ಸ್ವಾಲಂಬಿಯಾಗುವುದಷ್ಟೇ ಅಲ್ಲ ಇಡೀ ವಿಶ್ವಕ್ಕೆ ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿದೆ" ಎಂದಿದ್ದಾರೆ.