ಬೆಂಗಳೂರು, ನ.15 (DaijiworldNews/HR): ಹೆಚ್ ಡಿ ಕುಮಾರಸ್ವಾಮಿ ಅವರೇ, ನಿಮ್ಮ ಪಕ್ಷದ ಅಧಿಕೃತ ವೆಬ್ಸೈಟ್ನಲ್ಲಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷರ ಭಾವಚಿತ್ರಕ್ಕೇ ಜಾಗವಿಲ್ಲ. ಅವರು ನಿಮ್ಮ ಕುಟುಂಬದವರಲ್ಲ ಎಂಬ ಕಾರಣಕ್ಕಾಗಿ ಈ ದ್ವೇಷವೇ?" ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕದ ಬಿಜೆಪಿ, "ಹೆಚ್ ಡಿ ಕುಮಾರಸ್ವಾಮಿ ಅವರೇ, ನಿಮ್ಮ ಪಕ್ಷದ ಅಧಿಕೃತ ವೆಬ್ಸೈಟ್ನಲ್ಲಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷರ ಭಾವಚಿತ್ರಕ್ಕೇ ಜಾಗವಿಲ್ಲ. ಅವರು ನಿಮ್ಮ ಕುಟುಂಬದವರಲ್ಲ ಎಂಬ ಕಾರಣಕ್ಕಾಗಿ ಈ ದ್ವೇಷವೇ? ಇದೂ ಕುಟುಂಬ ರಾಜಕಾರಣದ ಭಾಗವೇ? ಇದು ಮಿಷನ್ ಕುಟುಂಬ ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದೆ.
ಇನ್ನು ಕುಮಾರಸ್ವಾಮಿ ಅವರೇ, ಜಾತ್ಯತೀತ ಜನತಾ ದಳ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಯಾರ ಕುಟುಂಬಕ್ಕೆ ನೀಡಿದ್ದೀರಿ? ರಾಜ್ಯ ಅಧ್ಯಕ್ಷ ಸ್ಥಾನದಲ್ಲಿ ಸುದೀರ್ಘ ಅವಧಿಗೆ ಇದ್ದಿದ್ದು ಯಾರ ಕುಟುಂಬ? ಎಂದು ಕೇಳಿದೆ.
ಕುಮಾರಸ್ವಾಮಿ ಅವರೇ, ಜೆಡಿಎಸ್ಗೆ ಅಧಿಕಾರ ಸಿಗುತ್ತದೆ ಎಂದು ಸ್ಪಷ್ಟವಾದ ಕ್ಷಣದಿಂದ ನಿಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ನೀವೇ ಯಾಕೆ ಆಯ್ಕೆಯಾಗುತ್ತೀರಿ? ಪಕ್ಷಕ್ಕಾಗಿ ದುಡಿಮೆ ಮಾಡಿದವರಿಗೆ ಸ್ವಲ್ಪ ಅವಕಾಶ ಕೊಡಬಹುದಲ್ಲವೇ? ಎಂದು ಹೇಳಿದೆ.