ಬೆಂಗಳೂರು, ನ.15 (DaijiworldNews/HR): ದಾಖಲೆ ಇಲ್ಲದೆ ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ನವರು ಇಲ್ಲದನ್ನು ಜೀವಂತವಾಗಿ ಇಡಲು ಹೊರಟಿದ್ದಾರೆ. ಕೇವಲ ಇದನ್ನು ಕಾಂಗ್ರೆಸ್ ರಾಜಕಾರಣಕ್ಕೆ ಅಷ್ಟೇ ಬಳಸುತ್ತಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಟ್ ಕಾಯಿನ್ ಹಗರಣದ ಕುರಿತಾಗಿ ಕಾಂಗ್ರೆಸ್ ನವರ ಬಳಿ ಏನಾದರೂ ದಾಖಲೆ ಇದ್ದರೆ ಪೊಲೀಸರಿಗೆ ಕೊಡಿ ಎಂದು ಹೇಳಿದ್ದೇನೆ. ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದೇನೆ" ಎಂದರು.
ಇನ್ನು "ದಾಖಲೆ ಇಲ್ಲದೆ ಕಾಂಗ್ರೆಸ್ ನವರು ಇಲ್ಲದನ್ನು ಜೀವಂತವಾಗಿ ಇಡಲು ಹೊರಟಿದ್ದಾರೆ. ಕೇವಲ ಇದನ್ನು ಕಾಂಗ್ರೆಸ್ ರಾಜಕಾರಣಕ್ಕೆ ಅಷ್ಟೇ ಬಳಸುತ್ತಿದೆ" ಎಂದು ಕಿಡಿಕಾರಿದ್ದಾರೆ.
"ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ವಿಶೇಷತೆಯಿಲ್ಲ, ಅದನ್ನು ಜೀವಂತವಾಗಿಡಬೇಕೆಂದು ವಿರೋಧ ಪಕ್ಷದವರು ನೋಡುತ್ತಿದ್ದಾರೆ, ಅದು ಅವರ ರಾಜಕೀಯ ಬಿಟ್ಟರೆ ಇದರಲ್ಲೇನೂ ಇಲ್ಲ" ಎಂದು ಹೇಳಿದ್ದಾರೆ.