ಗಯಾ, ನ.15 (DaijiworldNews/HR): ಗಯಾದ ಹಳ್ಳಿಯೊಂದರಲ್ಲಿ ಒಂದೇ ಕುಟುಂಬದ ನಾಲ್ವರನ್ನು ನಕ್ಸಲರು ಹತ್ಯೆ ಮಾಡಿದ್ದು, ಮನೆಯ ಅಂಗಳದಲ್ಲಿನ ದನಕ ಕೊಟ್ಟಿಗೆಯಲ್ಲಿ ನೇತು ಹಾಕಿ ಮನೆಯನ್ನು ಸ್ಫೋಟಿಸಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಈ ಘಟನೆ ಡುಮರಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಿಹಾರ ಜಾರ್ಖಂಡ್ ವಲಯದ ಸಮೀಪದಲ್ಲಿರುವ ಸರಯೂ ಸಿಂಗ್ ಭೋಕ್ತಾ ಮನೆಯ ಮೇಲೆ ನಿಷೇಧಿತ ಸಿಪಿಐ(ಮಾವೋವಾದಿ)ನ ಸದಸ್ಯರು ಈ ದಾಳಿ ನಡೆಸಿದ್ದಾರೆ.
ಭೋಕ್ತಾ ಅವರ ಮನೆಯಲ್ಲಿ ಮಾವೋವಾದಿಗಳು ಕರಪತ್ರ ಬಿಟ್ಟು ಹೋಗಿದ್ದು, ಭೋಕ್ತಾ ಮತ್ತು ಅವರ ಕುಟುಂಬವನ್ನು ಪೊಲೀಸ್ ಮಾಹಿತಿದಾರರು ಎಂದು ಆರೋಪಿಸಿದ್ದಾರೆ. ಅವರು ಕೊಟ್ಟಿರುವ ಸುಳಿವಿನಿಂದಲೇ ಈ ವರ್ಷ ಮಾರ್ಚ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ನಾಲ್ವರು ನಕ್ಸಲರು ಹತರಾಗಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಇನ್ನು ನಕ್ಸಲರು ದಾಳಿ ನಡೆಸಿದಾಗ ಭೋಕ್ತಾ ಮನೆಯಲ್ಲಿ ಇರಲಿಲ್ಲ. ಭೋಕ್ತಾ ಅವರ ಇಬ್ಬರು ಗಂಡು ಮಕ್ಕಳು ಹಾಗೂ ಅವರ ಹೆಂಡತಿಯರನ್ನು ಹತ್ಯೆ ಮಾಡಿ, ದನದ ಕೊಟ್ಟಿಗೆಯಲ್ಲಿ ಬಿದಿರು ಬೊಂಬುಗಳಿಗೆ ತೂಗಿ ಹಾಕಿದ್ದಮನೆಯೊಳಗೆ ಬಾಂಬ್ಗಳನ್ನು ಇಟ್ಟು ಸಿಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.