ಪಂಜಾಬ್, ನ 15 (DaijiworldNews/MS): ಕೊವೀಡ್ ಸಮಯದಲ್ಲಿ ತಮ್ಮ ಸಾಮಾಜಿಕ ಕಾರ್ಯಗಳಿಂದ ಹೆಚ್ಚು ಜನಪ್ರಿಯತೆಗಳಿದ್ದ ನಟ ಸೋನುಸೂದ್ ಅವರ ತಂಗಿ ಮಾಳ್ವಿಕಾ ಸೂದ್ 2022ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮೋಗಾ ಜಿಲ್ಲೆಯವರಾದ ಅವರು ಮೋಗಾ ಕ್ಷೇತ್ರದಿಂದಲೇ ಕಣಕ್ಕಿಳಿಯುವ ಸಾಧ್ಯತೆ ಇದೆ.
ಬಾಲಿವುಡ್ ನಟ ಸೋನು ಸೂದ್ ಮೊಗದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ " ನಮ್ಮ ಕುಟುಂಬ ಸಮಾಜ ಸೇವಾ ಕ್ಷೇತ್ರದೊಂದಿಗೆ ಬೆಸೆದುಕೊಂಡಿದೆ. ಬಡ ಮತ್ತು ನಿರ್ಗತಿಕ ಕುಟುಂಬಗಳಿಗೆ ಸಹಾಯ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ. ನನಗೆ ರಾಜಕೀಯ ಪ್ರವೇಶಿಸುವುದು ಯಾವುದೇ ಯೋಚನೆ ಇಲ್ಲ, ಮಳ್ವಿಕಾ ಮೊಗಾ ಮೂಲದವಳು ಯಾವ ರಾಜಕೀಯ ಪಕ್ಷದಿಂದ ಸ್ಪರ್ಧಿಸಬೇಕು ಇನ್ನು ನಿರ್ಧಾರ ತೆಗೆದುಕೊಂಡಿಲ್ಲ. ಅಲ್ಲದೆ ಯಾವುದೇ ಪಕ್ಷವನ್ನು ಹೆಸರಿಸುವುದು ಸರಿಯಲ್ಲ ಅದರೆ ಆಕೆ ಅಧಿಕೃತವಾಘಿ ಜನರ ಸೇವೆಗೆ ಸಿದ್ದಳಾಗಿದ್ದಾಳೆ ಎಂದು ಹೇಳಿದ್ದಾರೆ
ಸೂದ್ ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿದ್ದರು. ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡ ಸೋನು ಸೂದ್ ಭೇಟಿ ಮಾಡಿದ್ದರು. ಇದಾದ ನಂತರ ವಿವಿಧ ರಾಜಕೀಯ ಪಾಳಯಗಳಲ್ಲಿ ಗುಸು ಗುಸು ಶುರುವಾಗಿದೆ.