ನವದೆಹಲಿ, ನ.14 (DaijiworldNews/HR): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಧಾರಣೆಗಳತ್ತ ಗಮನ ನೀಡುವ ವಾಣಿಜ್ಯ ವಾತಾವರಣ ನಿರ್ಮಿಸುವ ಬಗೆ ಹೇಗೆ ಎನ್ನುವ ಕುರಿತು ಚರ್ಚಿಸುವುದಕ್ಕಾಗಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ರಾಜ್ಯಗಳ ಹಣಕಾಸು ಸಚಿವರ ಜೊತೆ ಸೋಮವಾರ ಸಭೆ ನಡೆಸಲಿದ್ದಾರೆ.
ಈ ಸಭೆಯು ವರ್ಚುವಲ್ ಆಗಿ ನಡೆಯಲಿದ್ದು, ಕೊರೊನಾದ ನಂತರ ದೇಶದಲ್ಲಿ ಆರ್ಥಿಕ ಚೇತರಿಕೆ ಕಂಡುಬಂದಿದ್ದು, ಖಾಸಗಿ ವಲಯದಲ್ಲಿ ಆಶಾದಾಯಕ ವಾತಾವರಣ ಇದೆ.
ಇನ್ನು ರಾಜ್ಯಗಳ ಮಟ್ಟದಲ್ಲಿನ ಸಮಸ್ಯೆಗಳು, ಅಲ್ಲಿರುವ ಅವಕಾಶಗಳು ಹಾಗೂ ಸವಾಲುಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಅವರು ತಿಳಿಸಿದ್ದಾರೆ.