ಬೆಂಗಳೂರು, ನ.14 (DaijiworldNews/HR): ಹಿಂದುತ್ವ ಮತ್ತು ಹಿಂದೂಯಿಸಂ ಎರಡು ಬೇರೆ ಬೇರೆ. ಹಿಂದುತ್ವ ಎನ್ನುವುದು ಪಕ್ಕಾ ರಾಜಕೀಯ ಎಂದು ನಟಿ ರಮ್ಯಾ ವ್ಯಾಖ್ಯಾನಿಸಿದ್ದಾರೆ.
ಈ ಕುರಿತು ತಮ್ಮ ಇನ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಾಕಿರುವ ರಮ್ಯಾ, "ಹಿಂದೂ ಧರ್ಮ ಮತ್ತು ಹಿಂದುತ್ವ ಬೇರೆ ಬೇರೆಯಾಗಿದೆ. ಹಿಂದೂ ಧರ್ಮ ಎನ್ನುವುದು ರಾಜಕೀಯವಲ್ಲ. ಆದ್ರೇ ಹಿಂದುತ್ವ ಎನ್ನುವುದು ರಾಜಕೀಯ ಎಂದಿದ್ದಾರೆ.
ಇನ್ನು ಹಿಂದೂ ಧರ್ಮ ಅಂದರೆ ಎಲ್ಲರ ಒಳಗೊಳ್ಳುವಿಕೆಯಾಗಿದೆ. ಇದಷ್ಟೇ ಅಲ್ಲದೇ ಎಲ್ಲರ ಬಗ್ಗೆಯೂ ಇರುವ ಪ್ರೀತಿ. ಆದ್ರೇ ಹಿಂದುತ್ವ ಇದಕ್ಕೆ ವಿರುದ್ಧವಾಗಿದೆ. ನಿಜವಾದ ಹಿಂದೂಗಳಿಗೆ ಈ ವ್ಯತ್ಯಾಸ ತಿಳಿದಿರಲಿದೆ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.