ನವದೆಹಲಿ, ನ.14 (DaijiworldNews/PY): ದೆಹಲಿಯ ಆಜಾದ್ಪುರದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ 17 ಮಂದಿ ಗಾಯಗೊಂಡಿದ್ದು, ಐದು ಮನೆಗಳು ಕುಸಿದ ಘಟನೆ ಭಾನುವಾರ ನಡೆದಿದೆ.
ಈ ಬಗ್ಗೆ ಆದರ್ಶ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದು, "ಸಿಲಿಂಡರ್ ಸ್ಪೋಟದಿಂದ ಆಜಾದ್ಪುರದ ಲಾಲ್ಭಾಗ್ ಮಸೀದಿ ಸಮೀಪದ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎನ್ನುವ ಕುರಿತು ಬೆಳಗ್ಗೆ ಕರೆ ಬಂದಿತ್ತು" ಎಂದಿದ್ದಾರೆ.
ಸಿಲಿಂಡರ್ ಸ್ಪೋಟದಿಂದ 17 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 16 ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಓರ್ವನನ್ನು ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
"ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.