ಮುಂಬೈ, ನ.14 (DaijiworldNews/HR): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಮತ್ತು ಇತರರ ವಿರುದ್ಧ 1.51 ಕೋಟಿ ರೂ.ಗೆ ವಂಚನೆ ಪ್ರಕರಣ ದಾಖಲಿಸಲಾಗಿದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ ಮತ್ತು ಇತರ ಕೆಲವು ವ್ಯಕ್ತಿಗಳ ವಿರುದ್ಧ ಮುಂಬೈ ಮೂಲದ ಉದ್ಯಮಿ ನಿತಿನ್ ಬಾರೈ ನೀಡಿದ ದೂರಿನ ಆಧಾರದ ಮೇಲೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ದಾಖಲಿಸಿದ್ದಾರೆ.
ಜುಲೈ 2014 ರಲ್ಲಿ, ಸೆಲ್ಫ್ ಫಿಟ್ನೆಸ್ ಕಂಪನಿಯ ನಿರ್ದೇಶಕ ಕಾಶಿಫ್ ಖಾನ್, ಶಿಲ್ಪ ಶೆಟ್ಟಿ, ರಾಜ್ ಕುಂದ್ರಾ ಮತ್ತು ಇತರರು ಲಾಭ ಗಳಿಸಲು ಉದ್ಯಮಕ್ಕೆ 1.51 ಕೋಟಿ ರೂಪಾಯಿ ಹೂಡಿಕೆ ಮಾಡುವಂತೆ ಕೇಳಿದರು ಎಂದು ದೂರುದಾರರು ಆರೋಪಿಸಿದ್ದಾರೆ.
ಇನ್ನು ದೂರಿನ ಆಧಾರದ ಮೇಲೆ ಬಾಂದ್ರಾ ಪೊಲೀಸರು 420 (ವಂಚನೆ), 120-ಬಿ (ಕ್ರಿಮಿನಲ್ ಪಿತೂರಿ), 506 (ಅಪರಾಧದ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶ) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.