ಕೋಲ್ಕತಾ, ನ.14 (DaijiworldNews/PY): "ನಿಮಗೆ ಬೆದರಿಕೆ ಹಾಕುವ ಟಿಎಂಸಿ ನಾಯಕರ ಕೈ ಕಾಲು ಮುರಿಯಿರಿ" ಎಂದು ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ಸ್ವಪನ್ ಮಜುಂದಾರ್ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದು, ವಿವಾದಕ್ಕೆ ಗುರಿಯಾಗಿದ್ದಾರೆ.
"ನಮ್ಮ ಕಾರ್ಯಕರ್ತರನ್ನು ಟಿಎಂಸಿ ನಾಯಕರು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲು ಪ್ರಯತ್ನಿಸಿದರೆ, ಭೀತಿಗೆ ಗುರಿಪಡಿಸಿದರೆ, ಆ ನಾಯಕ ಸುರಕ್ಷಿತವಾಗಿ ಹಿಂತಿರುಗುವುದಿಲ್ಲ. ಆತ್ಮರಕ್ಷಣೆಗಾಗಿ ಅವರನ ಕೈಕಾಲು ಮುರಿದು ನನ್ನ ಬಳಿಗೆ ಬನ್ನಿ. ನಾನು ನಿಮ್ಮ ಪರವಾಗಿ ನಿಲ್ಲುತ್ತೇನೆ" ಎಂದಿದ್ದಾರೆ.
ಬೊಂಗಾವ್ ದಕ್ಷಿಣದ ಬಿಜೆಪಿ ಶಾಸಕ ಸ್ವಪನ್ ಮಜುಂದಾರ್ ಅವರು, ಯಾವುದೇ ಸಂಕಷ್ಟದಲ್ಲಿರುವ ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಭರವಸೆ ನೀಡಿದ್ದು, ಪ್ರಚೋದನಕಾರಿ ಹೇಳಿಕೆ ನೀಡಿರುವು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ಕಂಡುಬಂದಿದೆ.