ತುಮಕೂರು, ನ.14 (DaijiworldNews/PY): "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇತ್ತೀಚೆಗೆ ಭೇಟಿಯಾಗಿ ಸಿಎಂ ಆಗುವ ಬಯಕೆಯನ್ನು ವ್ಯಕ್ತಪಡಿಸಿದ್ದೇನೆ" ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ದಲಿತ ಸಿಎಂ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಇಷ್ಟ ಇರುವವರು ಹಾಗೂ ಇಷ್ಟ ಇಲ್ಲದೇ ಇರುವವರೂ ಕೂಡಾ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ. ಮುಂಬರುವ ದಿನಗಳಲ್ಲಿ ಅದೃಷ್ಟ ಯಾರ ಪಾಲಾಗುತ್ತದೆ ಎಂದು ಕಾದು ನೋಡೋಣ" ಎಂದಿದ್ದಾರೆ.
"ರಾಹುಲ್ ಗಾಂಧಿ ಅವರು ತಮ್ಮನ್ನು ಏಕಾಗಿ ರಾಜ್ಯದಲ್ಲಿ ದಲಿತ ಸಿಎಂ ಸದ್ದು ಮೊಳಗುತ್ತಿದೆ ಎಂದು ಕೇಳಿದ್ದರು. ಈ ವೇಳೆ, ತಾವು ಸಹ ರಾಜ್ಯದ ಸಿಎಂ ಆಗಿ ಚುಕ್ಕಾಣಿ ಹಿಡಿಯುವ ಆಸೆ ಇರುವ ಕುರಿತು ರಾಹುಲ್ ಗಾಂಧಿ ಅವರಿಗೆ ಹೇಳಿದ್ದೇನೆ" ಎಂದು ತಿಳಿಸಿದ್ದಾರೆ.