ಬೆಂಗಳೂರು, ನ.13 (DaijiworldNews/HR): ಕರ್ನಾಟಕದಲ್ಲಿ ಶನಿವಾರ 245 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು ಮೂರು ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇಂದು 245 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆಯನ್ನು 29,91,614 ಕ್ಕೆ ಮತ್ತು ಸಾವಿನ ಸಂಖ್ಯೆ 38,143 ಕ್ಕೆ ತಲುಪಿದೆ.
ಇಂದು 251 ಜನರನ್ನು ಡಿಸ್ಚಾರ್ಜ್ ಆಗಿದ್ದು, ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,45,415 ಕ್ಕೆ ತಲುಪಿದೆ ಎಂದು ಹೇಳಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,027 ಇದೆ.
ಇನ್ನು ದಿನದ ಪಾಸಿಟಿವಿಟಿ ರೇಟ್ 0.24 ಪ್ರತಿಶತ ಮತ್ತು ಪ್ರಕರಣದ ಸಾವಿನ ಪ್ರಮಾಣವು 1.22 ಶೇಕಡಾ ಇದೆ.