ಮುಂಬೈ, ನ 13 (DaijiworldNews/MS): 1947ರಲ್ಲಿ ಸಿಕ್ಕ ಭಾರತದ ಸ್ವಾತಂತ್ರ್ಯ "ಭಿಕ್ಷೆ" ಎಂದು ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿರುವ ನಟಿ ಕಂಗನಾ ರಣಾವತ್ ಅವರು ಶನಿವಾರ ಟೀಕಾಕರರಿಗೆ ಮತ್ತೊಂದು ಪ್ರಶ್ನೆ ಎಸೆದಿದ್ದು, 1947 ರಲ್ಲಿ ಯಾವ ಯುದ್ಧ ನಡೆದಿತ್ತು ಎಂದು ಕೇಳಿದ್ದಾರೆ. ಯಾರಾದರೂ ತಮ್ಮ ಪ್ರಶ್ನೆಗೆ ಉತ್ತರಿಸಿದರೆ, ಕ್ಷಮೆಯಾಚಿಸುವುದಾಗಿ ಹಾಗೂ ತಮ್ಮ ಪದ್ಮಶ್ರೀಯನ್ನು ಹಿಂದಿರುಗಿಸುವುದಾಗಿ ಹೇಳಿದ್ದಾರೆ.
ನಾನು ಸ್ವಾತಂತ್ರಕ್ಕಾಗಿ ಮೊದಲ ಸಂಘಟಿತ ಯುದ್ದವನ್ನು1857 ರಲ್ಲಿ ನಡೆಸಲಾಯಿತು ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆಯೂ ಮಾತನಾಡಿದ್ದೇನೆ. ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಹೋರಾಟದ ಬಗ್ಗೆ ನನಗೆ ತಿಳಿದಿದೆ ಆದರೆ 1947 ರಲ್ಲಿ ಯಾವ ಯುದ್ಧ ನಡೆಯಿತು ಎಂಬುವುದರ ಬಗ್ಗೆ ನನಗೆ ಏನೂ ತಿಳಿದಿಲ್ಲ. ನನಗೆ ವಿವರಿಸಿ ನನಗೆ ಅರಿವು ಮೂಡಿಸಿದಲ್ಲಿ, ನಾನು ಪದ್ಮಶ್ರೀ ವಾಪಾಸ್ ನೀಡುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ
ಬುಧವಾರ ಸಂಜೆ ಮಾಧ್ಯಮವೊಂದರ ಸಂದರ್ಶನದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ 2014 ರಲ್ಲಿ ಭಾರತಕ್ಕೆ "ನಿಜವಾದ ಸ್ವಾತಂತ್ರ್ಯ" ಸಿಕ್ಕಿತು. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿದ್ದರು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದ ಎರಡು ದಿನಗಳ ನಂತರ ಕಂಗನಾ ವಿವಾದಾತ್ಮಕ ಹೇಳಿಕೆಯು ವಿವಿಧ ವಲಯಗಳ ರಾಜಕಾರಣಿಗಳು, ಇತಿಹಾಸಕಾರರು, ಶಿಕ್ಷಣ ತಜ್ಞರು, ಸಹ ನಟರು ಮತ್ತು ಇತರರು ಸೇರಿದಂತೆ ಹಲವಾರು ವಲಯಗಳಿಂದ ಆಕ್ರೋಶಕ್ಕೆ ಕೇಳಿಬಂದಿತ್ತು. , ಅನೇಕರು ಕಂಗನಾ ಪ್ರಶಸ್ತಿಯನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿದ್ದರು