ಮಣಿಪುರ, ನ.13 (DaijiworldNews/PY): ಮಣಿಪುರದಲ್ಲಿ ಶನಿವಾರ ನಡೆದ ಉಗ್ರರ ದಾಳಿಯಲ್ಲಿ 7 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಣಿಪುರದ ಚುರಾಚಂದಾಪುರ ಜಿಲ್ಲೆಯ ಮ್ಯಾನ್ಮಾರ್ ಗಡಿಯ ಬಳಿ ಈ ಘಟನೆ ನಡೆದಿದೆ. ಅಸ್ಸಾಂ ರೈಫಲ್ಸ್ನ ಬೆಂಗಾವಲು ಪಡೆಯನ್ನು ಅಪರಿಚಿತ ಭಯೋತ್ಪಾದಕರ ಗುಂಪು ಹೊಂಚು ಹಾಕಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾ ಏಳು ಯೋಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ಧಾರೆ. ಉಗ್ರರ ವಿರುದ್ದ ಪ್ರತಿ ದಾಳಿ ನಡೆಸಿದ ಸೇನೆ ಮೂವರು ಉಗ್ರರನ್ನು ಸದೆಬಡಿದಿದೆ ಎನ್ನಲಾಗಿದೆ.
ಉಗ್ರರು ಸೇನಾ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ ಪರಿಣಾಮ 46 ಅಸ್ಸಾಂ ರೈಫಲ್ಸ್ನ ಕರ್ನಲ್ ವಿಪ್ಲಪ್ ತ್ರಿಪಾಠಿ ಹಾಗೂ ಇತರ ಇಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಕರ್ನಲ್ ಅವರ ಪತ್ನಿ, ಮಗ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.