ನವದೆಹಲಿ, ನ.13 (DaijiworldNews/PY): "ಉತ್ತರಪ್ರದೇಶದಲ್ಲಿ ಮಧ್ಯರಾತ್ರಿಯೂ 16 ವರ್ಷದ ಹುಡುಗಿ ಆಭರಣ ಧರಿಸಿ ಓಡಾಡಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಸುಳ್ಳು" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದ ವರದಿಯೊಂದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಅವರು, "ಯುಪಿಯ ಮಹಿಳೆಯರು ಮಾತ್ರ ಪ್ರತಿದಿನ ತಾವು ಎದುರಿಸಬೇಕಾದ ಸ್ಥಿತಿಯ ಅರಿವಿದೆ" ಎಂದಿದ್ದಾರೆ.
"ಈ ಕಾರಣಕ್ಕೆ ಹುಡುಗಿ ಇದ್ದೇನೆ, ಹೋರಾಡುತ್ತೇನೆ ಎನ್ನುವುದು ಅಗತ್ಯವಾಗಿದೆ. ರಾಜಕಾರಣದಲ್ಲಿ ಮಹಿಳೆಯರು ಭಾಗಿಯಾಗುವುದು, ಸುರಕ್ಷತೆ ಬಗೆಗಿನ ನೀತಿ ರೂಪಿಸುವುದು ಅವಶ್ಯವಾಗಿದೆ" ಎಂದು ತಿಳಿಸಿದ್ದಾರೆ.