ಬೆಂಗಳೂರು, ನ 13 (DaijiworldNews/MS): ಹಿಂದೂ ಧರ್ಮ ಮತ್ತು ಹಿಂದುತ್ವಕ್ಕೆ ವ್ಯತ್ಯಾಸವಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿಯೂ ಗಾಂಧಿ ಹಾಗೂ ಗ್ಯಾಂಡಿ ಶಬ್ದದ ಮಧ್ಯೆ ವ್ಯತ್ಯಾಸವಿದೆ ಆದರೆ ಹಿಂದೂ ಧರ್ಮ ಹಾಗೂ ಹಿಂದುತ್ವದ ಮಧ್ಯೆ ವ್ಯತ್ಯಾಸವಿಲ್ಲ ಎಂದು ತಿರುಗೇಟು ನೀಡಿದೆ.
ಈ ಬಗ್ಗೆ ಬಿಜೆಪಿ ರಾಜ್ಯ ಘಟಕವೂ , ರಾಹುಲ್ ಗಾಂಧಿ ದೇವಾಲಯಕ್ಕೆ ಭೇಟಿ ನೀಡಿರುವ ಪೋಟೋ ಸೇರಿಸಿ ಟ್ವೀಟ್ ಮಾಡಿ ಕುಹಕವಾಡಿದ್ದು, " ಪ್ರೀತಿಯರಾಹುಲ್ ಗಾಂಧಿ,ಈ ವ್ಯಕ್ತಿ ನಿಮಗೆ ತಿಳಿದಿದೆಯೇ?ಇವರು ಹಿಂದುವೇ? ಇವರು ಹಿಂದುತ್ವವನ್ನು ಅನುಸರಿಸುತ್ತಾರೆಯೇ?ಹೌದು ಎಂದಾದರೆ, ಇವರೂ ಕೂಡಾ ಹಿಂಸಾತ್ಮಕನೇ? ಎಂದು ಟಾಂಗ್ ನೀಡಿದೆ.
ಮತ್ತೊಂದು ಟ್ವೀಟ್ ನಲ್ಲಿ ಗಾಂಧಿ ಹಾಗೂ ಗ್ಯಾಂಡಿ ಶಬ್ದದ ಮಧ್ಯೆ ವ್ಯತ್ಯಾಸವಿದೆ.ಆದರೆ ಹಿಂದೂ ಧರ್ಮ ಹಾಗೂ ಹಿಂದುತ್ವದ ಮಧ್ಯೆ ವ್ಯತ್ಯಾಸವಿಲ್ಲ.ಆಲೂಗೆಡ್ಡೆಯಿಂದ ಚಿನ್ನ ತೆಗೆಯಲು ಹೊರಟವರಿಗೆ ಮಾತ್ರ ಇಂಥ ವ್ಯತ್ಯಾಸ ಕಾಣಲು ಸಾಧ್ಯ ಎಂದು ಹೇಳಿದೆ.
ಹಿಂದುತ್ವ ಹಾಗೂ ಹಿಂದೂ ಧರ್ಮದ ವಿರೋಧವೇ ಕಾಂಗ್ರೆಸ್ ಡಿಎನ್ಎ.ಚುನಾವಣೆ ಬಂದಾಗ ಮಾತ್ರ ತಾವು ಹಿಂದೂಗಳು ಎಂದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳುತ್ತಾರೆ. ಚುನಾವಣೆ ಹೊರತುಪಡಿಸಿ ಉಳಿದ ಸಮಯದಲ್ಲಿ ಧರ್ಮದ್ವೇಷದಲ್ಲೇ ಕಾಲ ಕಳೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.