ನವದೆಹಲಿ, ನ 13 (DaijiworldNews/MS): ದೇಶಾದ್ಯಂತ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಬಳಕೆಯನ್ನು ಶ್ಲಾಘಿಸುತ್ತಾ, ಕಳೆದ ಏಳು ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ವಹಿವಾಟು 19 ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ. ಯುಪಿಐ ಅತಿ ಕಡಿಮೆ ಅವಧಿಯಲ್ಲಿ ಭಾರತವನ್ನು "ಡಿಜಿಟಲ್ ವಹಿವಾಟುಗಳ ವಿಷಯದಲ್ಲಿ ವಿಶ್ವದ ಅಗ್ರಗಣ್ಯ ರಾಷ್ಟ್ರ" ವನ್ನಾಗಿ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೇವಲ ಏಳು ವರ್ಷಗಳಲ್ಲಿ, ಭಾರತದಲ್ಲಿ ಡಿಜಿಟಲ್ ವಹಿವಾಟು ದೇಶದಲ್ಲಿ 19 ಪಟ್ಟು ಹೆಚ್ಚಾಗಿದೆ. ದೇಶದಲ್ಲಿ ಎಲ್ಲಿಯಾದರೂ ಇಂದು ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯು 24 ಗಂಟೆಗಳು, 7 ದಿನಗಳು ಮತ್ತು 12 ತಿಂಗಳುಗಳು ಯಾವುದೇ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ ಪ್ರಧಾನ ಮಂತ್ರಿ ತಿಳಿಸಿದ್ದಾರೆ.
6-7 ವರ್ಷಗಳ ಹಿಂದೆ ಬ್ಯಾಂಕಿಂಗ್, ಪಿಂಚಣಿ, ವಿಮೆ ಎಲ್ಲವೂ ‘ಭಾರತದಲ್ಲಿ ಎಕ್ಸ್ಕ್ಲೂಸಿವ್ ಕ್ಲಬ್’ ಎಂಬಂತೆ ಇತ್ತು. ದೇಶದ ಸಾಮಾನ್ಯ ನಾಗರಿಕರು, ಬಡ ಕುಟುಂಬಗಳು, ರೈತರು, ಸಣ್ಣ ವ್ಯಾಪಾರಿಗಳು-ಉದ್ಯಮಿಗಳು, ಮಹಿಳೆಯರು, ದಲಿತರು. -ವಂಚಿತರು-ಹಿಂದುಳಿದವರಿಗೆ ಈ ಎಲ್ಲಾ ಸೌಲಭ್ಯಗಳು ಅವರೆಲ್ಲರಿಗೂ ದೂರವಾಗಿದ್ದವು."
ಈ ಹಿಂದೆ ಯಾವುದೇ ಬ್ಯಾಂಕ್ ಶಾಖೆಗಳು ಇರಲಿಲ್ಲ, ಸಿಬ್ಬಂದಿ ಇಲ್ಲ, ಇಂಟರ್ನೆಟ್ ಇಲ್ಲ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜಾಗೃತಿ ಇರಲಿಲ್ಲ ಎಂದು ಪ್ರಧಾನಿ ತಿಳಿಸಿದರು.
''ಬಡವರಿಗೆ ಈ ಸೌಲಭ್ಯಗಳನ್ನು ತಲುಪಿಸುವ ಜವಾಬ್ದಾರಿ ಹೊತ್ತಿದ್ದ ಜನರೂ ಇತ್ತ ಗಮನಹರಿಸುತ್ತಿರಲಿಲ್ಲ .ಬದಲಾಗಿಯೂ ಬದಲಾಗದಿರುವುದಕ್ಕೆ ನಾನಾ ಸಬೂಬುಗಳನ್ನು ಹೇಳುತ್ತಿದ್ದರು. ಬ್ಯಾಂಕ್ ಶಾಖೆ ಇಲ್ಲ, ಸಿಬ್ಬಂದಿ ಇಲ್ಲ, ಇಂಟರ್ನೆಟ್ ಇಲ್ಲ, ಅರಿವು ಇಲ್ಲ ಹೀಗೆ ಕಾರಣಗಳಿದ್ದವು ಎಂದು ಪ್ರಧಾನಿ ಹೇಳಿದ್ದಾರೆ.