ಶಿವಮೊಗ್ಗ, ನ.13 (DaijiworldNews/PY): ಕೈ ನಾಯಕರ ವಿರುದ್ದ ವಾಗ್ದಾಳಿ ನಡೆಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ, "ಕಾಂಗ್ರೆಸ್ ನಾಯಕರಿಗೆ ಮಾಡಲು ಉದ್ಯೋಗವಿಲ್ಲ. ಈ ಕಾರಣದಿಂದ ಅವರು ಬಿಟ್ ಕಾಯಿನ್ ವಿಚಾರವನ್ನು ಎತ್ತಿಕೊಂಡು ಸುಖಾಸುಮ್ಮನೆ ಹೇಳಿಕೆ ನೀಡುತ್ತಿದ್ದಾರೆ" ಎಂದಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಟ್ ಕಾಯಿನ್ ದಂಧೆಯಲ್ಲಿ ಬಿಜೆಪಿ ನಾಯಕರು ಇಲ್ಲ. ಇದರಲ್ಲಿ ಬಿಜೆಪಿ ನಾಯಕರು ಇದ್ದರೆ ದಾಖಲೆ ಬಿಡುಗಡೆ ಮಾಡಲಿ. ಈ ಬಗ್ಗೆ ದಾಖಲೆ ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.
"ಕಾಂಗ್ರೆಸ್ ನಾಯಕರಿಗೆ ಮಾಡಲು ಬೇರೆ ಉದ್ಯೋಗವಿಲ್ಲ. ಹಾಗಾಗಿ ಅವರು ಬಿಟ್ ಕಾಯಿನ್ ವಿಷಯವನ್ನು ಎತ್ತಿಕೊಂಡು ಸುಮ್ಮನೆ ಬಿಜೆಪಿ ನಾಯಕರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿಯ ಯಾವುದೋ ಒಬ್ಬ ನಾಯಕ, ಮಂತ್ರಿನೋ, ಮುಖ್ಯಮಂತ್ರಿನೋ, ಪದಾಧಿಕಾರಿಗಳು ಯಾರಾದರೂ ಒಬ್ಬರಿದ್ದಾನೆ ಎನ್ನುವ ಬಗ್ಗೆ ದಾಖಲೆ ನೀಡಲಿ. ಅವರ ಬಗ್ಗೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ. ನಾವು ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿ ಹೇಳಿ ಅವರು ಅಧಿಕಾರ ಕಳೆದುಕೊಂಡರು" ಎಂದಿದ್ದಾರೆ.