ಭೋಪಾಲ್, ನ 13 (DaijiworldNews/MS): ಮಧ್ಯಪ್ರದೇಶವು ನವೆಂಬರ್ 15 ರಂದು ಭಗವಾನ್ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ಜಂಜಾಟಿಯ ಗೌರವ್ ದಿವಸ್ ಅನ್ನು ಆಚರಿಸುತ್ತದೆ. ಬುಡಕಟ್ಟು ಯೋಧರಿಗಾಗಿ ಸಮರ್ಪಿತವಾಗುವ ಬುಡಕಟ್ಟು ಜನರ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಭೋಪಾಲ್ ಗೆ ಆಗಮಿಸಲಿದ್ದು ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ . ಇದರೊಂದಿಗೆ ಭೋಪಾಲ್ನ ಜಂಬೂರಿ ಮೈದಾನದಲ್ಲಿ ದೇಶದ ಮೊದಲ ಸಾರ್ವಜನಿಕ-ಖಾಸಗಿ-ನಿರ್ಮಿತ ಹಬೀಬ್ಗಂಜ್ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನಿ ಮೋದಿ ನಾಲ್ಕು ಗಂಟೆಗಳ ಕಾಲ ಭೋಪಾಲ್ನಲ್ಲಿ ಮತ್ತು 1 ಗಂಟೆ 15 ನಿಮಿಷಗಳ ಕಾಲ ವೇದಿಕೆಯಲ್ಲಿರುತ್ತಾರೆ, ಇದಕ್ಕಾಗಿ ಐದು ಗುಮ್ಮಟಗಳು ನಿರ್ಮಾಣ ಹಂತದಲ್ಲಿವೆ. ಮಾತ್ರವಲ್ಲದೆ ಬುಡ್ಡಕಟ್ಟು ಜನರಿಗಾಗಿ ದೊಡ್ಡ ದೊಡ್ಡ ಪಂಡಲ್ಗಳನ್ನೂ ನಿರ್ಮಿಸಲಾಗಿದೆ. ಒಂದು ವಾರದಿಂದ ಸುಮಾರು 300ಕ್ಕೂ ಹೆಚ್ಚು ಕಾರ್ಮಿಕರು ಈ ಕೆಲಸದಲ್ಲಿ ತೊಡಗಿದ್ದಾರೆ.
ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ 23 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡುತ್ತಿದ್ದು, ಇದರಲ್ಲಿ 13 ಕೋಟಿ ರೂ.ಗಳನ್ನು ಕೇವಲ ಜಾಂಬೂರಿ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜನರನ್ನು ಸಾಗಿಸಲು ವೆಚ್ಚ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ
52 ಜಿಲ್ಲೆಗಳಿಂದ ಬರುವ ಜನರಿಗೆ ಸಾರಿಗೆ, ಆಹಾರ ಮತ್ತು ವಸತಿಗಾಗಿ 12 ಕೋಟಿ ರೂ. ಮತ್ತು ಐದು ಗುಮ್ಮಟಗಳು, ಟೆಂಟ್ಗಳು, ಅಲಂಕಾರ ಮತ್ತು ಪ್ರಚಾರಕ್ಕಾಗಿ ರೂ. 9 ಕೋಟಿಗೂ ಹೆಚ್ಚು ವೆಚ್ಚವಾಗಿದೆ
ಮಧ್ಯಪ್ರದೇಶ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ 47 ಸ್ಥಾನಗಳನ್ನು ಮೀಸಲಿಡಲಾಗಿದೆ. 2008ರಲ್ಲಿ ಇದರಲ್ಲಿ ಬಿಜೆಪಿ 29 ಸ್ಥಾನಗಳನ್ನು ಗೆದ್ದಿತ್ತು; 2013 ರಲ್ಲಿ ಈ ಸಂಖ್ಯೆ 31 ರಷ್ಟು ಹೆಚ್ಚಾಗಿತ್ತು, ಆದರೆ 2018 ರಲ್ಲಿ 47 ಸ್ಥಾನಗಳಲ್ಲಿ ಬಿಜೆಪಿ ಕೇವಲ 16 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿತ್ತು