ವಾರ್ಧಾ, ನ. 12 (DaijiworlNews/HR): ಹಿಂದೂ ಧರ್ಮ ಮತ್ತು ಹಿಂದುತ್ವಕ್ಕೆ ವ್ಯತ್ಯಾಸವಿದೆ. ನೀವು ಹಿಂದೂ ಆಗಿದ್ದರೆ ನಿಮಗೆ ಹಿಂದುತ್ವ ಏಕೆ ಬೇಕು. ಕಬೀರ, ಗುರುನಾನಕ್, ಮಹಾತ್ಮ ಗಾಂಧೀಜಿ ಹೀಗೆ ಅನೇಕರು ಇದನ್ನು ಅಳವಡಿಸಿಕೊಂಡು ಪ್ರಚಾರ ಮಾಡಿದ್ದಾರೆ. ದೇಶದ ಮೂಲೆ ಮೂಲೆಗೂ ಕಾಂಗ್ರೆಸ್ ಸಿದ್ಧಾಂತವನ್ನು ಕೊಂಡೊಯ್ಯೋಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ನ ಡಿಜಿಟಲ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಒಟ್ಟು ಎರಡು ಸಿದ್ಧಾಂತಗಳಿವೆ. ಕಾಂಗ್ರೆಸ್ನ ಒಂದು ಸಿದ್ಧಾಂತ ಮತ್ತು ಆರ್ಎಸ್ಎಸ್ನ ಒಂದು ಸಿದ್ಧಾಂತ. ಅದರಲ್ಲಿ ಆರೆಸ್ಸೆಸ್ನ ಸಿದ್ಧಾಂತ ದ್ವೇಷವನ್ನು ಹರಡುವುದ್ದಾಗಿದ್ದರೆ, ಕಾಂಗ್ರೆಸ್ನದ್ದು ಪ್ರೀತಿಯ ಸಿದ್ಧಾಂತವಾಗಿದೆ" ಎಂದರು.
ಇನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸುಪ್ರೀಂ ಕೋರ್ಟ್ ವಕೀಲ ಸಲ್ಮಾನ್ ಖುರ್ಷಿದ್ ಅವರು ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪುಸ್ತಕವನ್ನು ಬರೆದಿದ್ದು, ಈ ಪುಸ್ತಕದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು,ಗುರುವಾರ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಸಲ್ಮಾನ್ ಖುರ್ಷಿದ್ ಅವರನ್ನು ಗುರಿಯಾಗಿಸಿಕೊಂಡು, ಇದು ಹಿಂದುತ್ವದ ವಿರುದ್ಧ ಕಾಂಗ್ರೆಸ್ನ ದೊಡ್ಡ ಪಿತೂರಿಯಾಗಿದೆ ಮತ್ತು ಅವರ ಸಿದ್ಧಾಂತವು ಹಿಂದೂಗಳ ವಿರುದ್ಧವಾಗಿದೆ. ಇದು ಕೇವಲ ಹಿಂದೂಗಳ ಭಾವನೆಗಳಿಗೆ ಸಂಬಂಧಿಸಿದ್ದಲ್ಲ, ಆದರೆ ಭಾರತದ ಆತ್ಮವನ್ನು ಆಳವಾಗಿ ನೋಯಿಸುತ್ತದೆ" ಎಂದಿದ್ದರು.