ಉತ್ತರ ಪ್ರದೇಶ, ನ.12 (DaijiworldNews/PY): "ಜೈ ಶ್ರೀರಾಮ ಎಂದು ಘೋಷಣೆ ಕೂಗುವವರೆಲ್ಲಾ ಸಂತರಲ್ಲ" ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಶೀದ್ ಅಳ್ವಿ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಕಾಳಿ ಮಹೋತ್ಸವದಲ್ಲಿ ಅಳ್ವಿ ಅವರು ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ಮುಖಂಡ ಅಮಿತ್ ಮಾಳವೀಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, "ಘೋಷಣೆ ಕೂಗುವವರನ್ನು ರಾಕ್ಷಸರು ಎಂದು ಕರೆದಿದ್ದಾರೆ" ಎಂದು ದೂರಿದ್ದಾರೆ.
"ಕೆಲವು ಮಂದಿ ಜೈಶ್ರೀರಾಮ ಘೋಷಣೆ ಕೂಗುತ್ತಾ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಆದರೆ, ಅವರು ಸಂತರಲ್ಲ" ಎಂದು ಅಳ್ವಿ ಹೇಳಿಕೆ ನೀಡಿದ್ದರು.
ಹಿಂದುತ್ವ ಸಂಘಟನೆ ಬಗ್ಗೆ ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿತ್ತು.