ಬೆಂಗಳೂರು, ನ.12 (DaijiworldNews/PY): "ಬಿಟ್ ಕಾಯಿನ್ ಪ್ರಕರಣದಲ್ಲಿ ಪೊಲೀಸರು, ಸರ್ಕಾರ ಎಲ್ಲರೂ ಇದ್ದಾರೆ. ಹಾಗಾಗಿ ಬಿಜೆಪಿ ಸರ್ಕಾರದಿಂದ ಸತ್ಯಾಂಶ ಹೊರಬರುವುದಿಲ್ಲ" ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್, "ಸರ್ಕಾರ ಎಲ್ಲರೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇಲ್ಲಿ ಯಾರೂ ತನಿಖೆ ಮಾಡಿದರೂ ಸತ್ಯಾಂಶ ಹೊರಬರುವುದಿಲ್ಲ" ಎಂದಿದ್ದಾರೆ.
"ಸತ್ಯವನ್ನು ಮುಚ್ಚಿಹಾಕಲು ತನಿಖೆ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿದ್ದಲ್ಲಿ ಮಾತ್ರವೇ ಸತ್ಯಾಂಶ ಹೊರಬರಲಿದೆ. ಪ್ರಕರಣ ಬಗ್ಗೆ ಸತ್ಯಾಂಶ ಹೊರಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.
ಬಿಟ್ ಕಾಯಿನ್ ಪ್ರಕರದ ತನಿಖೆ ನಡೆದರೆ ಸಿಎಂ ಬದಲಾಗುತ್ತದೆ ಎನ್ನುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯಾರೂ ಬೇಕಾದರೂ ಮೂರನೇ ಸಿಎಂ ಹಾಗಲಿ. ಯಾರ ಹೆಸರನ್ನು ಕೂಡಾ ನಾನು ಇಲ್ಲಿ ಹೇಳುವುದಿಲ್ಲ. ಆದರೆ, ಮೂರನೇ ಸಿಎಂ ಆಗುವುದಂತು ನಿಜ. ಈಗಲೂ ನನ್ನ ಮಾತಿಗೆ ಬದ್ಧ" ಎಂದು ತಿಳಿಸಿದ್ದಾರೆ.