ಮುಂಬೈ, ನ. 12 (DaijiworlNews/HR): ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ಒಪ್ಪಿಸಿರುವ ಅವಧಿಯನ್ನು ನವೆಂಬರ್ 15ರವರೆ ವಿಶೇಷ ಪಿಎಂಎಲ್ಎ ನ್ಯಾಯಾಲಯವು ವಿಸ್ತರಿಸಿದೆ.
ಕಳೆದ ವಾರ ಅನಿಲ್ ದೇಶ್ಮುಖ್ ಅವರನ್ನು ಬಹುಕೋಟಿ ಹಣ ಅಕ್ರಮ ವರ್ಗಾವಣೆ ಆರೋಪ ಕುರಿತ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.
ಇನ್ನು ಈ ಹಿಂದೆ ವಿಶೇಷ ಕೋರ್ಟ್ ದೇಶ್ಮುಖ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಬಳಿಕ ಬಾಂಬೆ ಹೈಕೋರ್ಟ್ ಇ.ಡಿ ವಶಕ್ಕೆ ಒಪ್ಪಿಸಿ ಆದೇಶಿಸಿತ್ತು.