ಶ್ರೀಕಂಠಪುರ, ನ.12 (DaijiworldNews/PY): ಆನ್ಲೈನ್ನಲ್ಲಿ ಚೂಡಿದಾರ್ ಆರ್ಡರ್ ಮಾಡಿ ಮಹಿಳೆಯೋರ್ವರು 1 ಲಕ್ಷ ರೂ. ಕಳೆದುಕೊಂಡ ಘಟನೆ ಶ್ರೀಕಂಠಪುರದಲ್ಲಿ ನಡೆದಿದೆ.
ಕೂಟ್ಟುಮುಖ ಎಲ್ಲರಂಜಿಯನ್ನು ಪ್ರತೋಶ್ ಪ್ರಿಯೇಶ್ ಎನ್ನುವವರ ಪತ್ನಿ ಫೇಸ್ಬುಕ್ನಲ್ಲಿ ಜಾಹೀರಾತನ್ನು ಕಂಡು ಆನ್ಲೈನ್ಲ್ಲಿ 299 ರೂ. ಮೌಲ್ಯದ ಚೂಡಿದಾರ್ ಖರೀದಿ ಮಾಡಿದ್ದಾರೆ. ಬಳಿಕ ಗೂಗಲ್ ಪೇ ಮೂಲಕ 299 ರೂ. ಕಳುಹಿಸಿದ್ದಾಳೆ.
ಚೂಡಿದಾರ್ ಆರ್ಡರ್ ಮಾಡಿ ಒಂದು ವಾರ ಕಳೆದರೂ ಚೂಡಿದಾರ್ ಸಿಗದೇ ಇದ್ದ ವೇಳೆ ಜಾಹೀರಾತಿನಲ್ಲಿ ಕಂಡ ಸಂಸ್ಥೆಯ ನಂಬರ್ಗೆ ಕರೆ ಮಾಡಿದ್ದಾರೆ. ಈ ವೇಳೆ ಆಕೆಯ ಮೊಬೈಲ್ಗೆ 5 ಮೆಸೇಜ್ ಬಂದಿದೆ. ಮೆಸೇಜ್ ಓಪನ್ ನೋಡಿದಾಗ ಆಕೆಯ ಬ್ಯಾಂಕ್ ಅಕೌಂಟ್ನಿಂದ ಒಟ್ಟು 1 ಲಕ್ಷ ಹಣ ಕಾಣೆಯಾಗಿತ್ತು.
ಸದ್ಯ ಮಹಿಳೆಯ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.