ಮೈಸೂರು, ನ. 12 (DaijiworlNews/HR): ಜೆಡಿಎಸ್ ಎಂಎಲ್ಸಿ ಸಂದೇಶ್ ನಾಗರಾಜ್ ಜೆಡಿಎಸ್ ತೊರೆಯುತ್ತಿದ್ದು, ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂದೇಶ್, "ಬಿಜೆಪಿ ಸೇರಿದ ಬಳಿಕ ಜೆಡಿಎಸ್ ತೊರೆಯಲು ಕಾರಣವೇನು ಎಂಬುದನ್ನು ತಿಳಿಸುತ್ತೇನೆ. ಹೆಚ್.ಡಿ.ಕುಮಾರಸ್ವಾಮಿಯವರಿಗೆ ಪಕ್ಷದಲ್ಲಿ ನನ್ನ ಅಗತ್ಯವಿಲ್ಲ ಅನಿಸುತ್ತಿದ್ದು, ನನ್ನ ಅಗತ್ಯವಿಲ್ಲದಿದ್ದಾಗ ಆ ಜಾಗದಲ್ಲಿ ನಾನು ಯಾಕೆ ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ಮೂರು ವರ್ಷಗಳಿಂದ ಕೇವಲ ದೈಹಿಕವಾಗಿ ನಾನು ಜೆಡಿಎಸ್ ನಲ್ಲಿದ್ದೇನೆ. ಜೆಡಿಎಸ್ ನಾಯಕರ ಸಂಪರ್ಕದಲ್ಲಿಯೂ ಇಲ್ಲ. ವಿಧಾನಪರಿಷತ್ ಒಳಗೂ ನಾನು ಬಿಜೆಪಿ ಪರವಾಗಿಯೇ ಬಿಲ್ ಗಳಿಗೆ ಕೈ ಎತ್ತಿದ್ದೇನೆ" ಎಂದರು.
ನನಗೆ ಬಿಜೆಪಿಯಿಂದ ವಿಧಾನಪರಿಷತ್ ಟಿಕೆಟ್ ಸಿಗುವ ವಿಶ್ವಾಸ ಕೂಡ ಇದ್ದು, ನಾನು ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.