ಮುಂಬೈ, ನ12 (DaijiworldNews/MS): ಅಚ್ಚರಿ ಎಂಬಂತೆ ಬಾಲಿವುಡ್ ನಟ ಸಂಜಯ್ ದತ್ ಇತ್ತೀಚೆಗೆ ತಾಂಜಾನಿಯ ಪ್ರಧಾನಿ ಕಾಸಿಮ್ ಮಜಲಿವಾ ಅವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಗುರುವಾರ ಪ್ರಧಾನಿ ನಿವಾಸದಲ್ಲಿ ನಡೆದ ಭೇಟಿಯ ಕುರಿತು ಸಂಜಯ್ ಟ್ವಿಟ್ಟರ್, ಇನ್ ಸ್ಟಾಗ್ರಾಂ ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
ಚಿತ್ರಗಳ ಸರಮಾಲೆಯನ್ನು ಅಪ್ಲೋಮಾಡಿದ್ದು ಸಂಜಯ್ ದತ್ ತಾಂಜಾನಿಯ ಪ್ರಧಾನಿ ಜೊತೆ ಚರ್ಚೆಯಲ್ಲಿ ತೊಡಗಿರುವುದು ಕಂಡುಬಂದಿದೆ. ಈ ಬಗ್ಗೆ ಹಂಚಿಕೊಂಡ ಸಂದೇಶದಲ್ಲಿ "ಗೌರವಾನ್ವಿತ ಪ್ರಧಾನ ಮಂತ್ರಿ ಕಾಸಿಮ್ ಮಜಲಿವಾ ಅವರನ್ನು ಭೇಟಿಯಾಗಿರುವುದು ನಿಜಕ್ಕೂ ಗೌರವದ ಸಂಗತಿಯಾಗಿದೆ! ತಾಂಜೇನಿಯಾದ ಚಲನಚಿತ್ರೋದ್ಯಮವನ್ನು ಬೆಂಬಲಿಸಲು ಮತ್ತು ನಿಮ್ಮ ಸುಂದರ ದೇಶದ ಪ್ರವಾಸೋದ್ಯಮದಲ್ಲಿ ಹೂಡಿಕೆ ಮಾಡಲು ನನಗೆ ಸಂತೋಷವಾಗಿದೆ! ಶೀಘ್ರದಲ್ಲೇ ಮತ್ತೆ ಭೇಟಿ ನೀಡುವ ಭರವಸೆ ಇದೆ," ಎಂದು ದತ್ ಬರೆದಿದ್ದಾರೆ.
ಇದೇ ವೇಳೆ ತಾಂಜಾನಿಯಾ ಅರೆ ಸ್ವಾಯತ್ತ ಪ್ರದೇಶ ಜಂಜಿಬರ್ ನ ರಾಯಭಾರಿಯಾಗಿ ಸಂಜಯ್ ದತ್ ಅವರನ್ನು ನೇಮಕ ಮಾಡಲಾಗಿದೆ ಎನ್ನಲಾಗುತ್ತಿದೆ.