ಬೆಂಗಳೂರು, ನ. 12 (DaijiworlNews/HR): ದಲಿತ ವಿರೋಧಿ ಸಿದ್ದರಾಮಯ್ಯ ಈಗ "ಹಿಟ್ & ರನ್ " ರಾಜಕೀಯ ಆರಂಭಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ದಲಿತ ವಿರೋಧಿ ಸಿದ್ದರಾಮಯ್ಯ ಈಗ "ಹಿಟ್ & ರನ್ " ರಾಜಕೀಯ ಆರಂಭಿಸಿದ್ದು, ದಲಿತ ವಿರೋಧಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಆ ಆಕ್ರೋಶದ ಬೆಂಕಿಯಿಂದ ಪಾರಾಗಲು ಬಿಟ್ ಕಾಯಿನ್ ವಿಚಾರ ತೇಲಿ ಬಿಟ್ಟಿದ್ದಾರೆ. ಈ ದಲಿತ ವಿರೋಧಿಗೆ ತಕ್ಕ ಪಾಠ ಕಲಿಸಲು ಈಗ ಕಾಲ ಪಕ್ವವಾಗಿದೆ" ಎಂದಿದೆ.
ಸಿದ್ದರಾಮಯ್ಯನವರೇ ಟಿಪ್ಪು ಕುರಿತಾದ ಸುಳ್ಳು ಇತಿಹಾಸ ಓದುವ ಬದಲು ಬಿಟ್ ಕಾಯಿನ್ ಕುರಿತಾದ ಚಾರ್ಜ್ ಶೀಟ್ ತರಿಸಿಕೊಂಡು ಮೊದಲು ಓದಿ. ಆಗ ನಿಮ್ಮ ಪಕ್ಷದ ನಾಯಕರು ಈ ಹಗರಣದಲ್ಲಿ ಹೇಗೆ ಭಾಗಿಯಾಗಿದ್ದರೆಂಬುದು ಅರ್ಥವಾಗುತ್ತದೆ. ಈ ಹಗರಣಕ್ಕೆ ನೀವೇ ಪರೋಕ್ಷ ಬೆಂಬಲ ನೀಡಿರಬಹುದೆಂಬ ಶಂಕೆ ರಾಜ್ಯದ ಜನರನ್ನು ಕಾಡುತ್ತಿದೆ" ಎಂದು ಹೇಳಿದೆ.
ಇನ್ನು ಬಿಟ್ ಕಾಯಿನ್ ಹಗರಣ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಅಕ್ಷರಶಃ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.ಇಲ್ಲದ ವಸ್ತುವನ್ನು ಇದೇ ಎಂದು ಸ್ಥಾಪಿಸುವ ಭ್ರಮಾತ್ಮಕ ಕಾಯಿಲೆ ಕಾಂಗ್ರೆಸ್ ನಾಯಕರನ್ನು ಕಾಡುತ್ತಿರುವಂತಿದೆ" ಎಂದಿದೆ.
ಡಾರ್ಕ್ ನೆಟ್ & ಬಿಟ್ ಕಾಯಿನ್ ಜೊತೆ ಡ್ರಗ್ಸ್ ಹಗರಣಕ್ಕೆ ನಂಟಿದೆ ಎಂದು ನಾವು ಮೊದಲೇ ಪ್ರತಿಪಾದಿಸಿದ್ದೆವು. ಡಿಕೆಶಿ ಆಪ್ತ ಮೊಹಮ್ಮದ್ ನಲಪಾಡ್ & ಉಮರ್ ನಲಪಾಡ್ ಬಿಟ್ ಕಾಯಿನ್ ದಂಧೆಯ ಆರೋಪಿಯ ಜೊತೆ ಹೊಂದಿರುವ ನಂಟೇ ಇದಕ್ಕೆ ಸಾಕ್ಷಿ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಶ್ರೀಕಿ ನಿರಾತಂಕವಾಗಿ ಇದ್ದಿದ್ದಲ್ಲವೇ?ಎಂದು ಪ್ರಶ್ನಿಸಿದೆ.