ಶ್ರೀನಗರ, ನ. 12 (DaijiworlNews/HR): ಕಾರ್ಯಾಚರಣೆ ವೇಳೆ ನಡೆಸಿದ್ದ ಎನ್ಕೌಂಟರ್ನಲ್ಲಿ ಹತ್ಯೆಗೀಡಾಗಿದ್ದ ಉಗ್ರನೊಬ್ಬನ ಶವವನ್ನು ಭದ್ರತಾ ಪಡೆಗಳು ಶುಕ್ರವಾರ ಗುರುತಿಸಿರುವ ಘಟನೆ ಜಮ್ಮು ಕಾಶ್ಮೀರದ ಕುಲ್ಗಂ ಜಿಲ್ಲೆಯಲ್ಲಿ ನಡೆದಿದೆ.
ಕುಲ್ಗಂ ಪ್ರದೇಶದಲ್ಲಿ ಗುರುವಾರ ಎನ್ಕೌಂಟರ್ ಆರಂಭವಾಗಿತ್ತು ಉಗ್ರರ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಶುಕ್ರವಾರ ಬೆಳಿಗ್ಗೆ ಉಗ್ರನೊಬ್ಬನ ಶವ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಭದ್ರತಾ ಸಿಬ್ಬಂದಿಗಳಿಂದ ಶೋಧ ಮುಂದುವರಿಸಿದ್ದು, ಕಾರ್ಯಾಚರಣೆಯ ಸ್ಥಳದಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಒಳಗೊಂಡಂತೆ ಹೆಚ್ಚಿನ ಪ್ರಮಾಣದಲ್ಲಿ ವಿವಿಧ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.