ನವದೆಹಲಿ, ನ.11 (DaijiworldNews/HR): ಹಿರಿಯ ಕಾಂಗ್ರೆಸ್ ಮುಖಂಡ ಖುರ್ಷಿದ್ ಅವರು ಬರೆದಿರುವ 'ಸನ್ರೈಸ್ ಓವರ್ ಅಯೋಧ್ಯ ನ್ಯಾಶನಲ್ಹುಡ್ ಇನ್ ಅವರ್ ಟೈಮ್ಸ್'ಪುಸ್ತಕದಲ್ಲಿ ಹಿಂದುತ್ವವನ್ನು ಇಸ್ಲಾಂ ಮೂಲಭೂತವಾದಿ ಸಂಘಟನೆಗಳಾದ ಐಸಿಸ್, ಬೊಕೊ ಹರಾಮ್ ಸಂಘಟನೆಗಳಿಗೆ ಹೋಲಿಕೆ ಮಾಡಿದ್ದಾರೆ ಎಂದು ಆರೋಪಿಸಿ ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ದೂರು ದಾಖಲಿಸಿದ್ದಾರೆ.
ಪುಸ್ತಕದ ಪುಟ ಸಂಖ್ಯೆ 113ರಲ್ಲಿರುವ 'ಸ್ಯಾಫ್ರೋನ್ ಸ್ಕೈ'ಅಧ್ಯಾಯದಲ್ಲಿ, 'ಸನಾತನ ಧರ್ಮ ಮತ್ತು ಋಷಿಗಳು ಹಾಗೂ ಸಂತರನ್ನೊಳಗೊಂಡ ಶಾಸ್ತ್ರೀಯ ಹಿಂದೂ ಧರ್ಮವನ್ನು ಹಿಂದುತ್ವದ ದೃಢವಾದ ಆವೃತ್ತಿಯಿಂದ ಪಕ್ಕಕ್ಕೆ ತಳ್ಳಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಇದು ಶಾಂತಿ ಕದಡುವ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಯತ್ನವಾಗಿದೆ ಎಂದು ವಕೀಲರು ದೂರಿನಲ್ಲಿ ಹೇಳಿದ್ದಾರೆ.